ಯರಗಟ್ಟಿ: ಪಟ್ಟಣದ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ್ದ ೨೦೨೫-೨೬ ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಕ್ಷೇತ್ರ ಸಮಸ್ವಾಧಿಕಾರಿ ಬಿ. ಎಸ್. ಬ್ಯಾಳಿ ಚಾಲನೆ ನೀಡಿದರು.
ನಂತರ ಮಾತನಾಡಿ, ಕ್ರೀಡೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಪರಿಪೂರ್ಣ ಬದುಕು ಸಾಗಿಸಲು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಮರಡಿ ಬಸವೇಶ್ವರ ವಿದ್ಯಾ ಪ್ರಸಾರ ಮಂಡಳಿ ಅಧ್ಯಕ್ಷ ಗೌಡಪ್ಪ ದೇವರಡ್ಡಿ, ಉಪಾಧ್ಯಕ್ಷ ಮಂಜುನಾಥ ತಡಸಲೂರ, ಪ. ಪಂ. ಸದಸ್ಯರಾದ ಹನಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ವೈಧ್ಯಾಧಿಕಾರಿ ಡಾ. ಅನಸುಯಾ ಕಿವಡಸಣ್ಣನವರ, ಸಿಆರ್‌ಸಿ ವಸಂತ ಬಡಿಗೇರ, ಪ್ರಾಧಾನ ಗುರುಗಳಾದ ಬಿ. ಎಸ್. ಆಲದಕಟ್ಟಿ, ಎನ್. ಎಸ್. ಕಾಂಬಳೆ, ಡಾ. ಕುಮಾರ ದಾಸರ, ಶಿವಾನಂದ ಮಿಕಲಿ, ಎಮ್. ಎಸ್. ಗುಗ್ಗರನಟ್ಟಿ, ಆರ್. ಬಿ. ಗಾಣಗೇರ, ಎಮ್. ಎನ್. ಚೌಡಪ್ಪನ್ನವರ ಸೇರಿದಂತೆ ಅನೆಕರು ಇತರರು ಇದ್ದರು.