ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಒಂದು ಖುಷಿ ಸುದ್ದಿ ಹಂಚಿಕೊಂಡಿದೆ. ಅದೇನಪ್ಪಾ ಅಂದ್ರೆ, ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಮುಖ ಕೆಲಸ ಕಾರ್ಯಗಳು ಈಗ ಸಂಪೂರ್ಣವಾಗಿ ಮುಗಿದಿವೆ!
ನಿಮಗೆಲ್ಲಾ ನೆನಪಿರಬಹುದು, 2024ರ ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆದು, ಮಂದಿರ ಲೋಕಾರ್ಪಣೆಗೊಂಡಿತ್ತು.ಆದರೂ, ಆವರಣದೊಳಗಿನ ಕೆಲವು ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇದ್ದವು. ಈಗ, ಒಂದು ವರ್ಷದ ನಂತರ, ಆ ಎಲ್ಲಾ ಕೆಲಸಗಳೂ ಪೂರ್ಣಗೊಂಡು, ಮಂದಿರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಟ್ರಸ್ಟ್ ತನ್ನ ಎಕ್ಸ್ (X) ಖಾತೆಯಲ್ಲಿ ತಿಳಿಸಿದೆ.
ಹಾಗಾದ್ರೆ, ಏನೆಲ್ಲಾ ಹೊಸದಾಗಿ ಪೂರ್ಣಗೊಂಡಿದೆ ಅಂತ ನೋಡೋಣ ಬನ್ನಿ. ಬರೀ ರಾಮಲಲ್ಲಾನ ಮುಖ್ಯ ಗರ್ಭಗುಡಿ ಮಾತ್ರವಲ್ಲ, ಮಂದಿರದ ಆವರಣದೊಳಗೆ ಇನ್ನೂ ಆರು ಬೇರೆ ದೇವಸ್ಥಾನಗಳನ್ನು ಕಟ್ಟುವ ಪ್ಲಾನ್ ಇತ್ತು. ಈಗ ಆ ಆರೂ ದೇವಸ್ಥಾನಗಳು 100% ರೆಡಿಯಾಗಿವೆ.


