ವಕ್ಫ್ ಬೋರ್ಡಿನಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಮನೆ ನಿರ್ಮಾಣ :ಜಮೀರ್ ಅಹಮದ್ ಖಾನ್

Ravi Talawar
ವಕ್ಫ್ ಬೋರ್ಡಿನಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಮನೆ ನಿರ್ಮಾಣ :ಜಮೀರ್ ಅಹಮದ್ ಖಾನ್
WhatsApp Group Join Now
Telegram Group Join Now

ಕಲಬುರಗಿ:ರಾಜ್ಯದ ಪ್ರತಿ ತಾಲೂಕಿನಲ್ಲಿ ಮನೆ ಇಲ್ಲದ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಪ್ರಸ್ತಾವನೆ ಯಲ್ಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ವಿಂಟೆಜ್ ಪ್ಯಾಲಸ್ ನಲ್ಲಿ ಆಯೋಜಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಗಳ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಮುದಾಯದಲ್ಲಿ ಅತ್ಯಂತ ಬಡವರಿದ್ದು ಅಂತಹ ವಸತಿ ರಹಿತರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು. ಇದರಿಂದ ಮಂಡಳಿ ಗೂ ಆದಾಯ ಬರುವಂತಾಗುತ್ತದೆ, ಸಮುದಾಯಕ್ಕೂ ಒಳಿತಾಗುತ್ತದೆ ಎಂದು ಹೇಳಿದರು.

ಇದಲ್ಲದೆ ಮೌಜನ್ ಹಾಗೂ ಇಮಾಮ್‌ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಂದು ವಸತಿ ಖಾತೆ ಸಹ ಹೊಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ರಾಜ್ಯ ವಕ್ಫ್ ಮಂಡಳಿ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಅಂಬುಲೆನ್ಸ್ ನೀಡಲಾಗುವುದು. ಪ್ರತಿ ತಾಲೂಕಿಗೆ ಒಂದರಂತೆ ಫ್ರೀಜರ್ ಸಹ ನೀಡಲಾಗುವುದು ಎಂದರು.

ಅರ್ಜಿ ಸ್ವೀಕಾರ: ವಖ್ಫ್ ಅದಾಲತ್ ನಲ್ಲಿ ಗುಲ್ಬರ್ಗಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 368 ಅರ್ಜಿ ಸ್ವೀಕಾರ ಆಗಿದ್ದು ಆ ಪೈಕಿ

ಒತ್ತುವರಿ ಸಂಬಂಧ 100,
ಖಬರಸ್ಥಾನ ಕುರಿತ 55 ಹಾಗೂ
ಇತರೆ 213 ಅರ್ಜಿ ಗಳು ಸಲ್ಲಿಕೆಯಾದವು.

ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 82 ಅರ್ಜಿ ಸ್ವೀಕೃತ ವಾಗಿದ್ದು ಆ ಪೈಕಿ
ಒತ್ತುವರಿ ಸಂಬಂಧ 38,
ಖಬರಾಸ್ಥಾನ ಕುರಿತ 33 ಹಾಗೂ ಇತರೆ 11 ಅರ್ಜಿ ಸ್ವೀಕಾರವಾದವು.

ಇದುವರೆಗೆ ನಡೆಸಿದ ಐದು ಜಿಲ್ಲೆಗಳ ವಖ್ಫ್ ಅದಾಲತ್ ನಿಂದ 507 ಖಾತೆ ಆಗಿದೆ 382 ಪ್ರಗತಿ ಯಲ್ಲಿದೆ ಎಂದು ಸಚಿವರು ವಿವರಿಸಿದರು.

ಕಲಬುರಗಿಯಲ್ಲಿ ವಖ್ಫ್ ಆಸ್ತಿ 21440 ಎಕರೆ ಇದ್ದು 3610 ಎಕರೆ ಒತ್ತುವರಿ ಆಗಿದ್ದು
ಯಾದಗಿರಿಯಲ್ಲಿ 6194 ಎಕರೆ ಪೈಕಿ
123 ಎಕರೆ ಒತ್ತುವರಿ ಆಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಭಾಷಾ ಮಾತನಾಡಿ, ರಾಜ್ಯದಲ್ಲಿ ಆಸ್ತಿಗಳ ಸಂರಕ್ಷಣೆ ನಿಟ್ಟಿನಲ್ಲಿ ಅದರ ಖಾತಾ ಅಪಡೇಟ್, ಸರ್ವೇ, ಮುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಮಾತನಾಡಿ ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದಿಲ್ಲಿ ಅದಾಲತ್ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಜಿ. ಯಕೂಬ್, ಯಾದಗಿರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜಹಿರುದ್ದಿನ್ ಸವೆರಾ, ವಕ್ಫ್ ಬೋರ್ಡ್ ಸಿ.ಇ.ಓ ಜಿಲಾನಿ ಮೊಕಾಶಿ, ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಫರಾಜ್ ಉಲ್ ಇಸ್ಲಾಂ, ಫಜಲ್ ಖಾನ್, ವಾಹೆದ್ ಅಲಿ, ಕಲಬುರಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಹಬೀಬ್ ಸರ್ಮಸ್ತ್

WhatsApp Group Join Now
Telegram Group Join Now
Share This Article