ಸಂವಿಧಾನ ದಿನ ಆಚರಣೆ

Chandrashekar Pattar
ಸಂವಿಧಾನ ದಿನ  ಆಚರಣೆ
Oplus_131072
WhatsApp Group Join Now
Telegram Group Join Now

ಮೂಡಲಗಿ : ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನವಾಗಿದ್ದು, 1949, ನವೆಂಬರ್ 26 ರಂದು ಅಂಗೀಕರಿಸಿದ ದಿನವನ್ನು ಸಂವಿಧಾನ ದಿನ ಎಂದು ಆಚರಣೆ ಮಾಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ ಹೇಳಿದರು.

ಮಂಗಳವಾರದಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ, ಸಂವಿಧಾನ ದಿನದ ಅಂಗವಾಗಿ, ಡಾ.ಬಿ.ಆರ್.ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ, ಅವರ ಸಾಧನೆಯ ಬಗ್ಗೆ ಜನ ಸಾಮಾನ್ಯರಿಗೆ ತಲಪುವಂತೆ ಮಾಡುವುದೇ ಈ ದಿನದ ವಿಶೇಷತೆಯಾಗಿದೆ ಎಂದರು.

ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹದೇವ ಶೇಕ್ಕಿ ಮಾತನಾಡಿ, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ದಿನ ಅತ್ಯಂತ ಮಹತ್ವದ ದಿನವಾಗಿದೆ. ಸಂವಿಧಾನದಿಂದ ಎಲ್ಲ ಜನರಿಗೆ ಸಮಾನ ಹಕ್ಕು ಹಾಗೂ ಸೌಲಭ್ಯಗಳು ಸಿಗುತಿದ್ದು, ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕಾಗಿದೆ ಎಂದರು. ಬಿಜೆಪಿ ಅರಭಾವಿ ಮಂಡಲ ಕಾರ್ಯದರ್ಶಿ ಪಾಂಡು ಮಹೇಂದ್ರಕರ್ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಜೆಪಿ ಪದಾಧಿಕಾರಿಗಳಾದ ಜಗದೀಶ್ ತೇಲಿ, ಕೇದಾರಿ ಭಸ್ಮೆ, ಪರಪ್ಪ ಹಡಪದ, ಚಂದ್ರಶೇಖರ್ ಪತ್ತಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article