ಜೀವನದ ಗುರಿ ಸಾಧನೆಗೆ ನಿರಂತರ ಪ್ರಯತ್ನಶೀಲತೆ ಅಗತ್ಯ- ಬಸವರಾಜ ಬಬಲಾದ

Abushama Hawaldar
ಜೀವನದ ಗುರಿ ಸಾಧನೆಗೆ ನಿರಂತರ ಪ್ರಯತ್ನಶೀಲತೆ ಅಗತ್ಯ- ಬಸವರಾಜ ಬಬಲಾದ
WhatsApp Group Join Now
Telegram Group Join Now
ಇಂಡಿ: ಮಕ್ಕಳಲ್ಲಿ ಜ್ಞಾನದ ಶಕ್ತಿ ಹೊರಹೊಮ್ಮಬೇಕಾದರೆ ಪಾಲಕರು ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಬೇಕು ಎಂದು ಪಿಡಿಓ ಬಸವರಾಜ ಬಬಲಾದ ಹೇಳಿದರು.
        ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಶ್ರೀ ಜಟ್ಟಿಂಗೇಶ್ವರ ಕೋಚಿಂಗ್ ಕ್ಲಾಸಿಸ್ ವತಿಯಿಂದ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಎಸ್ ಎಸ್ ಎಲ್ ಸಿ-ಪಿಯುಸಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
       ಯುವ ಶಿಕ್ಷಕರ ನಿಸ್ವಾರ್ಥ ಶೈಕ್ಷಣಿಕ ಸೇವೆ ಗ್ರಾಮದ ಪ್ರಗತಿಯ ಸಂಕೇತವಾಗಿದೆ. ಕಠಿಣ ಪರಿಶ್ರಮದಿಂದ ಮಹೋನ್ನತ ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಗಟ್ಟಿಯಾಗಬೇಕು. ಜೀವನದ ಗುರಿ ಸಾಧನೆಗೆ ನಿರಂತರ ಪ್ರಯತ್ನಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
           ಇಂಡಿ ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಟ್ಟೆಪ್ಪ ಕೋಟಗೊಂಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಜತೆಗೆ ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಲು ಪೋಷಕರು ಮುಂದಾಗಬೇಕು ಎಂದು ಹೇಳಿದರು.
       ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ-ಪಿಯುಸಿ ವಿಭಾಗದ ಸಾಧಕ ವಿದ್ಯಾರ್ಥಿಗಳಾದ ಸಮರ್ಥ ಡಂಗಿ,ಸೌಮ್ಯ ರೂಗಿ, ಜ್ಯೋತಿ ಮಾವಿನಹಳ್ಳಿ, ಪ್ರಿಯಾಂಕ ಗಿಣ್ಣಿ, ಆರತಿ ಪೂಜಾರಿ, ಮಂಜುನಾಥ ಪೂಜಾರಿ, ತೇಜಸ್ವಿನಿ ಕಂಬಾರ, ಆದಿತ್ಯ ಕಂಬಾರ ಅವರನ್ನು ಸನ್ಮಾನಿಸಲಾಯಿತು.ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್,ಪುಸ್ತಕ, ನೋಟ್ ಬುಕ್ ಗಳನ್ನು ವಿತರಿಸಲಾಯಿತು.
          ಯುವ ಮುಖಂಡ ಪರಶುರಾಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಗ್ರಾ ಪಂ ಸದಸ್ಯ ಜಟ್ಟೆಪ್ಪ ಝಳಕಿ,
ವೀರ ರಾಯಣ್ಣ ಬ್ಯಾಂಕ್ ಅಧ್ಯಕ್ಷ ಮಾಳಪ್ಪ ನಿಂಬಾಳ, ಶಿಕ್ಷಕರಾದ ವಿಶ್ವನಾಥ ಝಳಕಿ, ರವಿ ಗಿಣ್ಣಿ, ಶಿವಾನಂದ ಮಡಿವಾಳರ, ಯುವ ಮುಖಂಡ ಜಟ್ಟೆಪ್ಪ ಮರಡಿ, ಉಮೇಶ ಹಲಸಂಗಿ, ಶಿಕ್ಷಕರಾದ ದ್ಯಾವಪ್ಪ ಹಿರೇಕುರುಬರ, ಅಶೋಕ ಝಳಕಿ, ವಿಜಯಕುಮಾರ ಗಿಣ್ಣಿ, ಅಪ್ಪು ಬಿರಾದಾರ, ಗುರುಬಾಯಿ ಹೊಸಮನಿ,ಯಲ್ಲಮ್ಮ ಸಾಲೋಟಗಿ, ವೈಶಾಲಿ ಸಾಲೋಟಗಿ, ರವಿ ಝಳಕಿ,ಶೋಭಾ ಸಾರವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article