ಶ್ರೀ ಹಳ್ಳದ ಗುಂಡ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ

Ravi Talawar
ಶ್ರೀ ಹಳ್ಳದ ಗುಂಡ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ
WhatsApp Group Join Now
Telegram Group Join Now

ಎಂ.ಕೆ. ಹುಬ್ಬಳ್ಳಿ,08: ಸಮೀಪದ ಸುಕ್ಷೇತ್ರ ದೇವರಶೀಗಹಳ್ಳಿ ಗ್ರಾಮದ ಕಾದಂಬರ ಕಾಲದ ಶ್ರೀ ಹಳ್ಳದ ಗುಂಡ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮ ಮೇ 9 ರಿಂದ 10 ರ ವರೆಗೆ ಜರುಗಲಿದೆ.

ಮೂರ್ತಿ ಪ್ರತಿಷ್ಠಾಪನೆ ಮುತ್ನಾಳ ಕೇದಾರ ಪೀಠ ಶಾಖಾ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೆರವೇರುವುದು. ದೇವರಶೀಗಿಹಳ್ಳಿ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ಸ್ವಾಮಿಜೀ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ವೇದ ಮೂರ್ತಿ ದೇವರಶೀಗಿಹಳ್ಳಿ ಶಿವಜಾತಯ್ಯಾ ಹಿರೇಮಠ, ಮಡಿವಾಳಯ್ಯ ಹಿರೇಮಠ, ರುದ್ರಯ್ಯಾ ಮಠದ, ಗಂಗಯ್ಯಾ ಹಿರೇಮಠ ವೈದಿಕತ್ವ ವಹಿಸುವರು.

ಮೇ 9 ರಂದು ಮುಂಜಾನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಹಾದ್ವಾರ ಉದ್ಘಾಟಿಸುವರು.

ಚನ್ನಮ್ಮನ ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ,ಮಾಜಿ ಜಿ. ಪಂ. ಅಧ್ಯಕ್ಷ ಚನ್ನಬಸಪ್ಪ ಮೋಕಾಸಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಉಳವಪ್ಪಾ ಉಳ್ಳಾಗಡ್ಡಿ, ಬೆಳಗಾವಿ ಕೆ.ಎಂ. ಎಫ್. ಸದಸ್ಯ ಬಸವರಾಜ ಪರವಣ್ಣವರ, ಬಿಜೆಪಿ ಮುಖಂಡ ಬಸನಗೌಡ ಶಿದ್ರಾಮಾನಿ ಅತಿಥಿಸ್ಥಾನ ವಹಿಸಲಿದ್ದಾರೆ.

ಮೇ 10 ರಂದು ಮುಂಜಾನೆ 5:00 ಗಂಟೆಗೆ ವೈದಿಕತ್ವ ಗೋಮಾತೆ ಪೂಜೆ ನವಗ್ರಹ ಶಾಂತಿ ಮೂರ್ತಿ ಪ್ರತಿಷ್ಠಾಪನೆ ನಂತರ ಕುಂಭಮೇಳದೊಂದಿಗೆ ಮುಂಜಾನೆ 9:00 ಗಂಟೆಗೆ ನೂತನ ದೇವಸ್ಥಾನವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ದೇವಸ್ಥಾನ ಉದ್ಘಾಟಿಸುವವರು.

ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಜಿ.ಪಂ ಸದಸ್ಯ ಶಂಕರ ಹೊಳಿ, ಮಾಜಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಕಿತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಾವಸಾಹೇಬ ಪಾಟೀಲ, ಬೆಳವಡಿ ಸೋಮೇಶ್ವರ ಶುಗರ್ ಫ್ಯಾಕ್ಟರಿ ನಿರ್ದೇಶಕ ಅಶೋಕ ಯರಗೊಪ್ಪ, ಮಾರ್ಗನಕೊಪ್ಪ ಶಿವಯೋಗಿ ದೊಡಮನಿ, ಕ್ಯಾರಾಕೊಪ್ಪ ಶ್ರೀಶೈಲ್ ತುರುಮರಿ, ದೇವರಶೀಗಿಹಳ್ಳಿ ಮಾಜಿ ಗ್ರಾ. ಪಂ ಅಧ್ಯಕ್ಷ ಕುಬೇರ ಗುಂಡಗವಿ, ಈಶ್ವರಯ್ಯಾ ಹಿರೇಮಠ, ಕಲ್ಲಪ್ಪ ಗುಂಡಗವಿ, ಎಂ. ಕೆ. ಹುಬ್ಬಳ್ಳಿ ಮಲಪ್ರಭಾ ಶುಗರ್ ಫ್ಯಾಕ್ಟರಿ ನಿರ್ದೇಶಕ ಭರತೇಶ ಶೆಬನ್ನವರ ಅತಿಥಿ ಸ್ಥಾನ ವಹಿಸಲಿದ್ದಾರೆ ಎಂದು ದೇವರಶೀಗಹಳ್ಳಿ ಗ್ರಾಮದ ಗುರು ಹಿರಿಯರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article