ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯೋಗಕ್ಕೆ ಬಿಗಿಭದ್ರತೆ

Ravi Talawar
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯೋಗಕ್ಕೆ ಬಿಗಿಭದ್ರತೆ
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್​ 08: ಮತಗಳ್ಳತನ ಆರೋಪ‌ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ (congress) ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಗೆ ಪೊಲೀಸ್ ಸರ್ಪಗಾವಲೇ ಏರ್ಪಟ್ಟಿದೆ. ಇತ್ತ ಚುನಾವಣೆ ಮುಖ್ಯ ಕಚೇರಿಗೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.  ಪ್ರತಿಭಟನೆ ಬಳಿಕ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದ್ದು, 6 ನಾಯಕರಿಗಷ್ಟೇ ಅನುಮತಿ ನೀಡಲಾಗಿದೆ.

ಇನ್ನು ದೂರು ಸಲ್ಲಿಕೆ ವೇಳೆ ರಾಹುಲ್​ ಗಾಂಧಿ ಡಿಕ್ಲರೇಶನ್ ಕಾಪಿಗೆ ಸಹಿ ಹಾಕುತ್ತಾರಾ ಅಥವಾ ಇಲ್ಲವಾ ಎಂಬ ಕುತೂಹಲ ಸೃಷ್ಟಿಯಾಗಿದೆ. ಏಕೆಂದರೆ ಡಿಕ್ಲರೇಶನ್​ಗೆ ಸಹಿ ಹಾಕುವಂತೆ ಚುನಾವಣಾ ಆಯೋಗ ತಾಕೀತು ಮಾಡಿತ್ತು. ಡಿಕ್ಲರೇಶನ್​​ ಮಾದರಿಯನ್ನು ಚುನಾವಣಾ ಆಯೋಗ ತಾವೇ ಸ್ವತಃ ರಾಹುಲ್ ಗಾಂಧಿಗೆ ರವಾನಿಸಿದ್ದು, ಕಾನೂನು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಒಂದು ವೇಳೆ ರಾಹುಲ್​ ಗಾಂಧಿ ಡಿಕ್ಲರೇಶನ್​ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆಗಳು ಎದುರಿಸಬೇಕಾಗಬಹುದು.

WhatsApp Group Join Now
Telegram Group Join Now
Share This Article