ಬಳ್ಳಾರಿ, ಜ.31..: ನಗರದ ಡಿಸಿ ಕಚೇರಿ ಎದುರಿನ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಕಾಂಗ್ರೆಸ್ ಜಿಲ್ಲಾ ಘಟಕದಿಂದ ನರೇಗಾ ಹೆಸರು ಬದಲಾವಣೆ ವಿರುದ್ದ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ ತಲೆಗೆ ಟವಲ್ ಕಟ್ಟಿಕೊಂಡು ಪ್ರತಿಭಟನಾ ಧರಣಿ ನಡೆಸಲಾಯ್ತು.
ಕೇಂದ್ರ ಸರ್ಕಾರದಿಂದ ದೇಶದ ಬಡ ಜನತೆಗೆ ಅವಶ್ಯವಾದ ಉದ್ಯೋಗವನ್ನು ನೀಡುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬದಲಾವಣೆ ಮಾಡಿರುವುದರ ವಿರುದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿ. ನರೇಗಾ ಹೆಸರು ಬದಲಾವಣೆ ಮಾಡದಂತೆ ಆಗ್ರಹಿಸಲಾಯ್ತು.
ಈ ವೇಳೆ ಮಾತನಾಡಿದ ಮುಖಂಡರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಖ್ಯ ಕಾರಣರಾದ ಮಹಾತ್ಮಾ ಗಾಂಧಿಯ ಹೆಸರನ್ನೇ ತೆಗೆದು. ಅದನ್ನು ಜಿ. ರಾಮ್ ಜಿ ಎಂದು ಬದಲಾವಣೆ ಮಾಡಿರುವ ಬಿಜೆಪಿ ಧೋರಣೆಯನ್ನು ವಿರೋಧಿಸಲಾಯ್ತು.
ಯೋಜನೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರ ತಡೆಯಲು “ವಿಕಸಿತ ಭಾರತ ಗ್ಯಾರೆಂಟಿ ಫರ್ ರೋಜಗಾರ್ ಆಜೀವಿಕ ಮಿಷನ್ ಗ್ರಾಮೀಣ” ಎಂದು ಬದಲು ಮಾಡಿದೆ ಎಂದು ಹೇಳುತ್ತಿದೆ ಬಿಜೆಪಿ. ಭ್ರಷ್ಟಾಚಾರ ತಡೆಯಲಿ ಆದರೆ ಮಹಾತ್ಮನ ಹೆಸರು ಬದಲಾವಣೆ ಯಾಕೆ ಬೇಕು. ಜೊತೆಗೆ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆ ಮಾಡಿ, ಬಡವರ ಹೊಟ್ಟೆಗೆ ಕಂಟಕ ತರುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಅವಶ್ಯ ಇಲ್ಲ ಎನ್ನಲಾಯ್ತು.
ಪ್ರತಿಭಟನೆಯಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಪ್ರಚಾರ ಸಮಿತಿಯ ಈರನಗೌಡ, ಮುಖಂಡರುಗಳಾದ ಎ.ಮಾನಯ್ಯ, ಕಮಲಮ್ಮ, ಹೆಚ್.ಸಿದ್ದೇಶ್, ಅಲುವೇಲು ಸುರೇಶ್ ಮೊದಲಾದವರು ಪಾಲ್ಗೊಂಡಿದ್ದರು


