ಕಾಂಗ್ರೆಸ್ ಶಾಸಕರ ಗುಂಡಾ ವರ್ತನೆ ಎಲೆ ಮಿರುತ್ತಿದೆ : ಸುಭಾಷ ಪಾಟೀಲ 

Hasiru Kranti
ಕಾಂಗ್ರೆಸ್ ಶಾಸಕರ ಗುಂಡಾ ವರ್ತನೆ ಎಲೆ ಮಿರುತ್ತಿದೆ : ಸುಭಾಷ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ :- ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರ್ಕಾರದ ಶಾಸಕರ ಗುಂಡಾ ವರ್ತನೆ, ಭ್ರಷ್ಟಾಚಾರ ಮಿತ್ತಿಮಿರುತ್ತಿದ್ದು ಮೊನ್ನೆ ಬಳ್ಳಾರಿ ಶಾಸಕ ಭರತ ರೆಡ್ಡಿ  ಗುಂಡಾ ವರ್ತನೆ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಡಿಸಿಸಿ ಬ್ಯಾಂಕ ನೌಕರರ ಮೇಲೆ ಹಲ್ಯ ಪ್ರಕರಣ ರಾಜ್ಯದಲ್ಲಿ ಇನ್ನೂ ಅನೇಕ ಪ್ರಕರಣಗಳು ಎಲೆ ಮಿರುತ್ತಿದ್ದು ರಾಜ್ಯದ ಜನ ಎಲ್ಲವನ್ನು ಗಮನಿಸುತ್ತಿದ್ದು ಇವರ ದರ್ಬಾರು ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಕರ್ನಾಟಕ ಮರ್ಪಟ್ಟಿದ್ದು ಪಾನ್ ಅಂಗಡಿಯಲ್ಲೂ ಸಾರಾಯಿ ಸಿಗತಾ ಇದೆ, ಢಾಬಾಗಳಲ್ಲಿ ಅವ್ಯಾಹತವಾಗಿ ಎಗ್ಗಿಲದೇ ಸಾರಾಯಿ ಮಾರಾಟ ಆಗ್ತಾ ಇದೆ ಎಂದು ಬೆಳಗಾವಿ ಜಿಲ್ಲಾಗ್ರಾಮಾಂತರ  ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.
    ಅವರು ಸೋಮವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿಗಳು ಎಫ್ ಐ ಆರ್ ಹಾಕದ ಪೊಲೀಸ್  ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಗ್ರಹಿಸಿದರು.
    ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ರಾಜ್ಯ ಇಂದು ಗುಂಡಾ ಶಾಸಕರ ವರ್ತನೆಯಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳ ತಾಣವಾಗಿದೆ,ಕಾಂಗ್ರೆಸ್ ಪಕ್ಷದ ಗುಂಡಾ ವರ್ತನೆ  ತೋರಿದ ಶಾಸಕರ ಮೇಲೆ ಕ್ರಮ ಆಗ್ತಾ ಇಲ್ಲಾ, ಪೊಲೀಸ್ ರು ಶಾಸಕರ ಮೇಲೆ ಎಫ್ ಐ ಆರ್ ಧಾಖಲು ಮಾಡ್ತಾ ಇಲ್ಲಾ, ಪೊಲೀಸರು ಅವರ ಕೈಗೊಂಬೆ ಆಗಿ ಕೆಲಸ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.
         ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ದೇಶಪಾಂಡೆ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಪ್ರಧಾನ ಕಾರ್ಯದರ್ಶಿ ಈರಯ್ಯ ಖೋತ,ಮನೋಜ ಪಾಟೀಲ ಹಾಗೂ ಇತರರಿದ್ದರು
WhatsApp Group Join Now
Telegram Group Join Now
Share This Article