ಆಪರೇಷನ್‌ ಸಿಂಧೂರ್‌ ಕುರಿತು ಶಶಿ ತರೂರ್ ನಿಲುವಿಗೆ ಕಾಂಗ್ರೆಸ್‌ ನಾಯಕರು ಅಸಮಾಧಾನ

Ravi Talawar
ಆಪರೇಷನ್‌ ಸಿಂಧೂರ್‌ ಕುರಿತು ಶಶಿ ತರೂರ್ ನಿಲುವಿಗೆ ಕಾಂಗ್ರೆಸ್‌ ನಾಯಕರು ಅಸಮಾಧಾನ
WhatsApp Group Join Now
Telegram Group Join Now

ನವದೆಹಲಿ: ‘ಆಪರೇಷನ್ ಸಿಂಧೂರ’ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳಿದ ಸಂಸದ ಶಶಿ ತರೂರ್ ನಿಲುವಿಗೆ ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೈಪಡೆ ಇದೀಗ​ ಮನೆ ಒಡೆದ ಹಾಲಿನಂತಾಗಿದೆ.

ಭಾರತ-ಪಾಕಿಸ್ತಾನ ಸಂಘರ್ಷದ ಕುರಿತ ಪಕ್ಷದ ಅಧಿಕೃತ ಹೇಳಿಕೆಗಿಂತ ಭಿನ್ನವಾಗಿ ಪದೇ ಪದೇ ಶಶಿ ತರೂರ್ ಹೇಳಿಕೆ ನೀಡುತ್ತಿರುವುದು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳುತ್ತಿರುವುದು ಪಕ್ಷದಲ್ಲಿ ಅಸಮಾಧಾನವನ್ನುಂಟು ಮಾಡಿದೆ.

ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆ, ಆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಕುರಿತು ಚರ್ಚಿಸಲು ಗುರುವಾರ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ, ‘ಶಶಿ ತರೂರ್ ಲಕ್ಷಣ ರೇಖೆ ದಾಟಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆಂದು ತಿಳಿದುಬಂದಿದೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೈರಾಮ್ ರಮೇಶ್, “ಶಶಿ ತರೂರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಧಿಕೃತ ನಿಲುವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ, ಆ ಬಳಿಕದ ಭಾರತ-ಪಾಕಿಸ್ತಾನ ಸಂಘರ್ಷ, ಕದನ ವಿರಾಮ ಘೋಷಣೆ, ಅದಕ್ಕೆ ನಾವು ಮಧ್ಯಸ್ಥಿಕೆ ವಹಿಸಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ, ಇವೆಲ್ಲವೂ ಮೋದಿ ಸರ್ಕಾರದ ವೈಫಲ್ಯ ಎಂಬುವುದು ಕಾಂಗ್ರೆಸ್‌ ಪಕ್ಷದ ಅಭಿಪ್ರಾಯವಾಗಿದೆ.

WhatsApp Group Join Now
Telegram Group Join Now
Share This Article