ಕಾಂಗ್ರೆಸ್‌ ಪ್ರಜಾಪ್ರಭುತ್ವ ವಿರೋಧಿ: ಸಚಿವ ಪ್ರಹ್ಲಾದ ಜೋಶಿ

Ravi Talawar
ಕಾಂಗ್ರೆಸ್‌ ಪ್ರಜಾಪ್ರಭುತ್ವ ವಿರೋಧಿ: ಸಚಿವ ಪ್ರಹ್ಲಾದ ಜೋಶಿ
WhatsApp Group Join Now
Telegram Group Join Now

 

ಹುಬ್ಬಳ್ಳಿಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಯಾವುದೇ ಸಕಾರಣ ಇಲ್ಲದೇ ಅಧಿವೇಶನವನ್ನು ಎರಡು-ಮೂರು ದಿನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್‌ಗಳಿದ್ದವು. ಗೋವಾ ಸೆಡ್ಯುಲ್ಡ್ ಟ್ರೈಬ್, ನ್ಯಾಷನಲ್ ಸ್ಪೋರ್ಟ್ಸ್, ಆ್ಯಂಟಿ‌ಡೂಪಿಂಗ್ ಇತ್ತು. ನ್ಯಾಷನಲ್ ಸ್ಪೋರ್ಟ್ಸ್ ಬಿಲ್, 2030ರ ಕಾಮನ್‌ವೆಲ್ತ್ ಹಾಗೂ ಒಲಂಪಿಕ್ಸ್ ಭಾರತ ಆಯೋಜನೆ ಮಾಡುವ ಗುರಿ ಇತ್ತು. ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಲಾಗಿತ್ತು. ಅದಕ್ಕೂ ಕಾಂಗ್ರೆಸ್ ವಿರೋಧ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಾಯ ತೆರಿಗೆ ಬಿಲ್ ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದಿದೆ‌. ಅನೇಕ ಬಿಲ್​​ಗಳನ್ನು ಪಾಸ್ ಮಾಡಲಾಯಿತು. ಜನಾದೇಶ ಸ್ವೀಕಾರ ಮಾಡದೇ ಸುಳ್ಳು ಹೇಳಿ, ಕಾಲಹರಣ ಮಾಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ ಮಾಡಲು ಆಗ್ರಹಿಸಿದರೂ ಅದರ ಬಗ್ಗೆ ಚರ್ಚೆ ಮಾಡಲಿಲ್ಲ. ಪಹಲ್ಗಾಮ್ ಚರ್ಚೆ ಮಾಡಲಿಲ್ಲ. ಅವರ ಟ್ರ್ಯಾಕ್ ರೆಕಾಡ್೯ ಭೀಕರವಾಗಿದೆ ಅಂತ ಅರ್ಥವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ದೇಶಗಳ ಬಗ್ಗೆ ಹಾಗೂ ಘಟನೆ ನಡೆದ ಬಳಿಕ ನಡೆದುಕೊಂಡ ರೀತಿ ಕೆಟ್ಟದಾಗಿದೆ. ಅಧಿವೇಶನದಲ್ಲಿ 13 ಬಿಲ್ ಪಾಸ್ ಆಗಿದ್ದು, ಎರಡು ಸೆಲೆಕ್ಟ್ ಕಮಿಟಿಗೆ ಕಳುಹಿಸಲಾಗಿದೆ ಎಂದರು.

WhatsApp Group Join Now
Telegram Group Join Now
Share This Article