ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್​ ಹೈಕಮಾಂಡ್​ ಬುಲಾವ್

Ravi Talawar
ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್​ ಹೈಕಮಾಂಡ್​ ಬುಲಾವ್
WhatsApp Group Join Now
Telegram Group Join Now

ನವದೆಹಲಿ, ಮಾರ್ಚ್ 13: ಕರ್ನಾಟಕ ಕಾಂಗ್ರೆಸ್​ನಲ್ಲಿ ಕುರ್ಚಿ ಬದಲಾವಣೆ ಫೈಟ್ ಮತ್ತೊಂದು ರೂಪ ಪಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಎಚ್ಚರಿಕೆ ನೀಡಿದ ಬಳಿಕ ಬಹಿರಂಗವಾಗಿ ಮಾತನಾಡುತ್ತಿದ್ದ ನಾಯಕರು ಮೌನವಾಗಿದ್ದರು.‌ ಇದೀಗ ಹೈಕಮಾಂಡ್ ನಾಯಕರೇ ಅಖಾಡಕ್ಕೆ ಇಳಿದು, ಸಚಿವರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಒಬ್ಬೊಬ್ಬರೇ ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯ ವಿಧಾನಮಂಡಲ ಅಧಿವೇಶನದ ಮಧ್ಯೆಯೂ ಸಚಿವರು ದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರನ್ನು ಭೇಟಿಯಾಗಿದ್ದಾರೆ‌.

ಹಲವು ಮಂದಿ ಸಚಿವರು ದೆಹಲಿಗೆ: ಹೈಕಮಾಂಡ್ ಜತೆ ಮಾತುಕತೆ: ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್, ಎಂಬಿ ಪಾಟೀಲ್‌ ಜೊತೆ ಬುಧವಾರ ಕೆಸಿ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article