ಎಲ್ಲಾ ವಲಯಗಳಲ್ಲೂ ಕಾಂಗ್ರೆಸ್ ಸರ್ಕಾರ ವಿಫಲ: ಆರ್.ಅಶೋಕ್ ವಾಗ್ದಾಳಿ

Ravi Talawar
ಎಲ್ಲಾ ವಲಯಗಳಲ್ಲೂ ಕಾಂಗ್ರೆಸ್ ಸರ್ಕಾರ ವಿಫಲ:  ಆರ್.ಅಶೋಕ್ ವಾಗ್ದಾಳಿ
WhatsApp Group Join Now
Telegram Group Join Now

ಮೈಸೂರು,17: : ಮುಂಬರುವ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯ ಕದನವಾಗಿದ, ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಸೋಲಿಸುವ ಗುರಿ ಹೊಂದಿದ್ದೇವೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಗುರುವಾರ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾತನಾಡಿದ ಅವರ, ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬಹುಮತ ಹೊಂದಿರುವುದ್ದು ಹಾಗೂ ಎಲ್ಲಾ ವಲಯಗಳಲ್ಲೂ ಕಾಂಗ್ರೆಸ್ ಸರ್ಕಾರ ವಿಫಲವಾಗಿರುವ ಕಾರಣ ಆ ಪಕ್ಷಕ್ಕೆ ಸೋಲು ಕಾಣವಂತೆ ಮಾಡಬೇಕಿದೆ ಎಂದು ಹೇಳಿದರು.

ಮನೆಹಾಳ ಕಾಂಗ್ರೆಸ್‌ ಒಂದು ವರ್ಷವಾದರೂ ಒಳ್ಳೆಯ ಕೆಲಸ ಮಾಡಲಿಲ್ಲ.ಮೊನ್ನೆ ನೇಹಾಳ ಹತ್ಯೆ ಆಯಿತು, ಮಣ್ಣು ಇನ್ನೂ ಆರಿಲ್ಲ. ಇದೀಗ ಮತ್ತೆ ಅಂಜಲಿ ಎನ್ನುವ ಹೆಣ್ಣು ಮಗುವಿನ ಹತ್ಯೆಯಾಗಿದೆ. ಈ ರೀತಿ ಹೆಣ್ಣು ಮಕ್ಕಳು ಹತ್ಯೆ ಆಗುತ್ತಿರೋದು ಸರ್ಕಾರ ಸಂಪೂರ್ಣ ಹದಗೆಟ್ಟಿರೋದಕ್ಕೆ ಸಾಕ್ಷಿ. ರಾಜ್ಯದಲ್ಲಿ ಪೋಲಿಸ್ ಇಲಾಖೆ ಬದುಕಿದಿಯಾ? ಸರ್ಕಾರ ಬದುಕಿದೆಯಾ ಸತ್ತಿದೆಯಾ? ಎಂದು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಕಾಲುಗುಣ ಅಂತಹದ್ದು, ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಬರಗಾಲದ ಬಂದಿದೆ. ಸರ್ಕಾರ ಬರಗಾಲ ಸರಿಯಾಗಿ ನಿಭಾಯಿಸುತ್ತಿಲ್ಲ. ಕೇಂದ್ರ ಸರ್ಕಾರ 3545 ಕೋಟಿ ಪರಿಹಾರ ನೀಡಿದೆ. ಕೇಂದ್ರ ಸರ್ಕಾರ ಹಣಕ್ಕೊಟ್ಟರೂ ಸಿದ್ದರಾಮಯ್ಯ ಏಕೆ ಇನ್ನೂ ಬಿಡುಗಡೆ ಮಾಡುತ್ತಿಲ್ಲ ಅಂದರೆ ಸಿದ್ದರಾಮಯ್ಯ ಸರ್ಕಾರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಎಂಟು ತಿಂಗಳಿಂದ ರೈತರ ಹಾಲಿಗೆ ಹಣವನ್ನು ಕೊಟ್ಟಿಲ್ಲ, ಆಂಬುಲೆನ್ಸ್ ಚಾಲಕರಿಗೆ ಹಣಕೊಟ್ಟಿಲ್ಲ, ಗೆಸ್ಟ್ ಲಚ್ಚರರ್ ಗೆ ವೇತನ ಕೊಟ್ಟಿಲ್ಲ. ಹೀಗೆ ಆದರೆ ಪಕ್ಕದ ಕೇರಳ ರಾಜ್ಯ ಆದ ರೀತಿ ಕರ್ನಾಟಕ ಪಾಪರ್ ಆಗುತ್ತೆ. ಪಾಕಿಸ್ತಾನದಲ್ಲಿ ಹಾಲಿನ ಬೆಲೆ, ಅಕ್ಕಿ ಬೆಲೆ, ಟೀ ಬೆಲೆ , ಗೋದಿ ಹಿಟ್ಟು ಬೆಲೆ ನೋಡಿದರೆ ಆ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರ ಬರಲಿದೆ ಎನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article