ಡಿಸಿಪಿಯಾಗಿ ಭಡ್ತಿ: ನಾರಾಯಣ ಬರಮನಿಯವರಿಗೆ ಅಭಿನಂದನೆಗಳ ಸುರಿಮಳೆ

Ravi Talawar
ಡಿಸಿಪಿಯಾಗಿ ಭಡ್ತಿ: ನಾರಾಯಣ ಬರಮನಿಯವರಿಗೆ ಅಭಿನಂದನೆಗಳ ಸುರಿಮಳೆ
WhatsApp Group Join Now
Telegram Group Join Now

ಬೆಳಗಾವಿ ೨೭: ಬೆಳಗಾವಿ ಮಹಾನಗರದ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾಗಿ ಭಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ ಡಿಸಿಪಿ ನಾರಾಯಣ ಬರಮನಿ ಅವರಿಗೆ ಆತ್ಮೀಯರು , ಹಿತೈಷಿಗಳಿಂದ ಅಭಿನಂದನೆಗಳ ಸುರಿಮಳೆ ಆಗುತ್ತಿದೆ.

ದಿನಾಲು ಅನೇಕ ಗಣ್ಯರು, ಹಿತೈಷಿಗಳು , ಆತ್ಮೀಯರು ಉಪ ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಆಗಮಿಸಿ ಸತ್ಕರಿಸಿ ಗೌರವಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ರಾಮತೀರ್ಥ ನಗರ ಬಸವೇಶ್ವರ ಬಡಾವಣೆ , ರುಕ್ಮಿಣಿ ನಗರ ನಿವಾಸಿಗಳು ರವಿವಾರ ಶಾಲು ಹೊದಿಸಿ ಗೌರವಿಸಿದರು.ನಿರುಪಾದಯ್ಯ ಕಲ್ಲೋಳಿ ಮಠ , ಡಾ. ಕೇದಾರೇಶ್ವರ, ವಿಠ್ಠಲ ಬಡಿಗೇರ, ಗೋಪಾಲ ಖಟಾವಕರ, ಎ.ಬಿ . ಕಾಂಬಳೆ, ಪವನ ಖಟಾವಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article