ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗಾಗಿ ಸರ್ಕಾರಿ ಶಾಲೆಗಳ ಹರಾಜು ಖಂಡನೆ 

Ravi Talawar
ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗಾಗಿ ಸರ್ಕಾರಿ ಶಾಲೆಗಳ ಹರಾಜು ಖಂಡನೆ 
WhatsApp Group Join Now
Telegram Group Join Now
ಬಳ್ಳಾರಿ,ನ.24. : “ನಾವು ಶಂಕಿಸಿದAತೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನಿಂದ ೨,೦೦೦ ಕೋಟಿ ಸಾಲವನ್ನು ಪಡೆದು ೭೦೦ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆಗಳನ್ನು) ಸ್ಥಾಪಿಸುವುದರ ಹಿಂದಿರುವ ಕರ್ನಾಟಕ ಸರ್ಕಾರದ  ಉದ್ದೇಶವು  ೭,೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಕರ್ನಾಟಕ ಅಧ್ಯಕ್ಷ ಪ್ರೊ||ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.
ಶಾಲೆಗಳನ್ನು ಇನ್ನೂ ಮುಚ್ಚುವ ಮುನ್ನವೇ ‘ಈ ಶಾಲೆಗಳ ಕಟ್ಟಡ ಗಳನ್ನು ಪಾಳುಬೀಳಲು ಬಿಡುವುದಿಲ್ಲ, ಬದಲಿಗೆ ಖಾಸಗಿ ನೋಂದಾಯಿತ ಸಂಸ್ಥೆಗಳಿಗೆ ನೀಡಲಾಗುವುದು’ ಎಂಬ   ಶಿಕ್ಷಣ ಸಚಿವರ ಹೇಳಿಕೆ ಸರ್ಕಾರದ ನೈಜ ಉದ್ದೇಶವನ್ನು ಬಟ್ಟಾಬಯಲು ಮಾಡಿದೆ.  ಸರ್ಕಾರಿ ಶಾಲೆಗಳನ್ನು ವಾಸ್ತವವಾಗಿ ಹರಾಜು ಹಾಕಲು ಮುಂದಾಗಿರುವುದು, ಶಾಲೆಗಳ ಮುಂದೆ ಜಾಹೀರಾತುಗಳಿಗೆ ಸ್ಥಳ ನೀಡುವುದು, ರಾಜ್ಯ ಸರ್ಕಾರ ಆರ್ಥಿಕವಾಗಿಯಷ್ಟೇ ಅಲ್ಲ ನೈತಿಕವಾಗಿಯೂ  ದಿವಾಳಿಯಾಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ‘ನೋಂದಾಯಿತ’ ಸಂಸ್ಥೆಗಳ ಹೆಸರಿನಲ್ಲಿ, ೭,೦೦೦ ದಿಂದ ೪೦,೦೦೦ ಸರ್ಕಾರಿ ಶಾಲೆಗಳ ಪ್ರಮುಖ ಜಾಗವನ್ನು ವಾಸ್ತವವಾಗಿ, ಅಧಿಕಾರದಲ್ಲಿರುವ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ದಾನ ಮಾಡಲು ರಾಜ್ಯ ಸರ್ಕಾರವೇ ಮುಂದಾಗಿರುವುದು ನಿಜಕ್ಕೂ ಖೇದಕರ. ಬಡ ಮಕ್ಕಳಿಗೆ ಅದರಲ್ಲೂ ಮುಖ್ಯವಾಗಿ  ಹೆಣ್ಣು ಮಕ್ಕಳು, ರೈತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಉಳಿದಿರುವ ಏಕೈಕ ಸ್ಥಳ ಸರ್ಕಾರಿ ಶಾಲೆಗಳು; ಈ ಶಾಲೆಗಳನ್ನು ಹರಾಜು ಹಾಕಲು ಸರ್ಕಾರ ಮುಂದಾಗಿರುವುದು ಅತ್ಯಂತ ಖಂಡನೀಯ.”
“ಈ ಎಲ್ಲಾ ಬೆಳವಣಿಗೆಗಳು ನಮ್ಮಲ್ಲಿ ಮೂಡಿಸುವ ಪ್ರಶ್ನೆ : ವಿಶ್ವಬ್ಯಾಂಕ್ ಮತ್ತು ಎಡಿಬಿಯಿಂದ ಪಡೆದ ಸಾಲಗಳು ಎಂದಿಗೂ ಪರೋಪಕಾರಕ್ಕೆ ಕೊಟ್ಟ ಹಣವಲ್ಲ, ಅವು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ‘ಸುಧಾರಣೆಗಳನ್ನು’ ಜಾರಿಗೊಳಿಸುವ ಷರತ್ತುಗಳಲ್ಲವೇ?  ಸಾಲವನ್ನು ಪಡೆಯಲು ರಾಜ್ಯ ಸರ್ಕಾರ ಎಡಿಬಿ ಯೊಂದಿಗೆ ಮಾಡಿಕೊಂಡರುವ ಎಲ್ಲಾ ಶರತ್ತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಉದ್ದೇಶಿತ ‘ಸರ್ಕಾರಿ ಶಾಲೆಗಳ ಆಸ್ತಿಗಳನ್ನು ರಕ್ಷಿಸುವ ವಿಶೇಷ ಮಸೂದೆ’; ‘ಕಾರ್ಪೊರೇಟ್ ಉದ್ಯಮಪತಿಗಳ’ ಪರವಾಗಿರುತ್ತದೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ. ಆದ್ದರಿಂದ ಈ ಮಸೂದೆಯನ್ನು ಕೈಬಿಟ್ಟು ಇರುವ ಕಾನೂನುಗಳನ್ನೇ ಬಳಸಿಕೊಂಡು ಸಾರ್ವಜನಿಕ ಆಸ್ತಿಗಳನ್ನು ಕಾಪಾಡಬೇಕು ಹಾಗೂ ಕರ್ನಾಟಕ ಸರ್ಕಾರ ‘ಕೆಪಿಎಸ್ ಮ್ಯಾಗ್ನೆಟ್ ಶಾಲೆ’ ಯೋಜನೆಯನ್ನು ಕೈ ಬಿಟ್ಟು ಸಾರ್ವಜನಿಕ ಶಿಕ್ಷಣವನ್ನು ಬಲಗೊಳಿಸಬೇಕು ಎಂದು ಶಿಕ್ಷಣ ಉಳಿಸಿ ಸಮಿತಿ ಆಗ್ರಹಿಸುತ್ತದೆ. ‘ಕೆಪಿಎಸ್ ಮ್ಯಾಗ್ನೆಟ್ ಶಾಲೆ’ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು  ಹರಾಜು ಹಾಕಲು ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಸಮಸ್ತ ಜನತೆ ಬೀದಿಗಿಳಿದು ಹೋರಾಟ ನಡೆಸಬೇಕೆಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಕರೆ ನೀಡುತ್ತದೆ ಎಂದು
ಜಿಲ್ಲಾ ಸೆಕ್ರೆಟರಿಯಟ್ ಸದಸ್ಯ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article