ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮದ ಪ್ರತಿಷ್ಠಿತ ಶ್ರೀ ಮಾರುತಿ ದೇವರ ಕಾರ್ತಿಕ ಮಾಸದ ಸಮಾರೋಪ ಸಮಾರಂಭವು ಅತೀ ವಿಜೃಂಭಣೆಯಿಂದ ಭಕ್ತರ ಭಕ್ತಿ ಭಾವದಲ್ಲಿ ನೆರವೇರಿತು.
ಬೆಳಿಗ್ಗೆ 6-00 ಘಂಟೆಗೆ ಮಹಾಭಿಷೇಕ, ರುದ್ರಾಭಿಷೇಕ, ಮಹಾ ಮಂಗಳಾರತಿ, ಗೋಪಾಳ ಬುಟ್ಟಿ ಪೂಜೆ, ಪಲ್ಲಕ್ಕಿ ಉತ್ಸವ, ಭವ್ಯ ಮಹಾಪ್ರಸಾದ ಅದ್ದೂರಿಯಾಗಿ ನೆರವೇರಿತು. ಈ ಭಕ್ತಿ ಭಾವದ ಕಾರ್ಯಕ್ರಮದಲ್ಲಿ ಕಾರ್ತಿಕ್ ಉತ್ಸವ ಕಮಿಟಿ ಸದಸ್ಯರು, ಶ್ರೀ ಮಾರುತಿ ದೇವಸ್ಥಾನ ಕಮಿಟಿ ಸದಸ್ಯರು, ಸಮಸ್ತ ಸಹಸ್ರಾರು ಮಾರುತಿ ದೇವರ ಭಕ್ತರು, ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡು ಭಕ್ತಿ ಪರವಶರಾದರು.