ಬಳ್ಳಾರಿ:ಅ,6- ಕೈಗಾರಿಕೆಗಳನ್ನು ಆರಂಭಿಸಲು ಕೆಐಡಿಬಿ ವಶ ಪಡಿಸಿಕೊಂಡಿರುವ ಜಮೀನಿಗೆ ಸುಪ್ರೀಂ ಕೋರ್ಟಿನ ಆದೇಶದಂತೆ ಎಲ್ಲರಿಗೂವ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಇಂದು ಭೂ ಸಂತ್ರಸ್ಥರು ನಡೆಸಿರುವ ತಾಲೂಕಿನ ಕುಡುತಿನಿ ಪಟ್ಟಣದ ಬಂದ್ ಸ್ವಯಂ ಪ್ರೇರಿತವಾಗಿ ಸಂಪೂರ್ಣ ಬಂದ್ ನಡೆದಿದೆ.
ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಹಾಗು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಂತ್ರಸ್ಥರು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ್ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟರಯಿಂದಲೇ ಪಟ್ಟದ ಪ್ರಮುಖ ರಸ್ತೆ ಬಂದ್ ಮಾಡಿ ತಮ್ಮ ಬೇಡಿಕೆ ಈಡೇರಿಕೆಗಾಗಿ 600 ದಿನಗಳಿಗೂ ಹೆಚ್ಚು ಕಾಲದಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೇ ಇರುವುದರ ವಿರುದ್ದ ಘೋಷಣೆ ಕೂಗಿದರು.
ಪಟ್ಟಣದ ಶಾಲೆ ಕಾಲೇಜು, ವಾಣಿಜ್ಯ ವಹಿವಾಟು, ಬ್ಯಾಂಕ್, ಇತರೇ ಕಚೇರಿಗಳನ್ನು ಬಂದ್ ಮಾಡಲಾಗಿತ್ತು, ರಸ್ತೆ ಬಂದ್ ಮಾಡಿದ್ದರಿಂದ ವಾಹನಗಳು, ಅದರಲ್ಲೂ ಬಸ್ ಗಳು ಬೈಪಾಸ್ ಮೂಲಕವೇ ಸಂಚರಿಸಿದವು. ಕಂಪ್ಲಿಗೆ ತೆರಳುವ ವಾಹನಗಳು, ಬೈಪಾಸ್ ನಿಂದ ಅಂಬೇಡ್ಕರ್ ವೃತ್ತದ ಮೂಲಕ ತೆರಳಿದವು.
ಕುಡುತಿನಿ ಮತ್ತು ಸುತ್ತಮುತ್ತಲ 7 ಗ್ರಾಮಗಳ 10 ಸಾವಿರಕ್ಕೂ ಹೆಚ್ಚು ಎಕರೆಯನ್ನು ಕೆಐಡಿಬಿ ಮೂಲಕ ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಂಡು 14 ವರ್ಷ ಕಳೆದರೂ ಕೈಗಾರಿಕೆಗಳನ್ನು ಆರಂಭಿಸಿಲ್ಲ. ಈಗಾದರೂ ಆರಂಭಿಸಬೇಕು. ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಪರಿಹಾರ ನೀಡಿ ಇಲ್ಲ. ವಶಪಡಿಸಿಕೊಂಡ ಜಮೀನಿನ್ನು ಅಭಿವೃದ್ಧಿ ಪಡಿಸಿ ಶೇ 50 ರಷ್ಟು ಜಮೀನು ನೀಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ.
ಕಳೆದ 600 ದಿನಗಳಿಂದ ಹೋರಾಟ ಮಾಡುತ್ತಿದ್ದರೂ, ಇದಕ್ಕೆ ಸರ್ಕಾರ ಸ್ಪಂದಿಸಸಿಲ್ಲ ಅದಕ್ಕಾಗಿ ಕುಡುತಿನಿ ಬಂದ್ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆಂದು ಬಸವರಾಜ್, ಸತ್ಯಬಾಬು ಹೇಳಿದರು.
ಮಧ್ಯಾಹ್ನದ ನಂತರ ಪಟ್ಟದಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಬೈಪಾಸ್ ಬಳಿ ತೆರಳಿ ಕೆಲಹೊತ್ತು ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಯ್ತು.ಇಂದಿನ ಕುಡುತಿನಿ ಬಂದ್ ಗೂ ಸ್ಪಂದಿಸದಿದ್ದರೆ ಬಳ್ಳಾರಿ ಜಿಲ್ಲೆ ಬಂದ್ ಮಾಡಲಿದೆಂಬ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭೂ ಸಂತ್ರಸ್ಥರಾದ ತಿಪ್ಪೆಸ್ವಾಮಿ, ಜಂಗ್ಲಿಸಾಬ್, ಶಿವರಾಮ್ , ರೇಣುಕ ರಾಜ್, ದೊಡ್ಡಬಸಪ್ಪ, ಜಾನೆಕುಂಟೆ ದೊಡ್ಡಬಸನಗೌಡ, ಕೊಳಗಲ್ಲು ಗಂಗಾಧರಗೌಡ, ಎಸ್. ವೈ ಗುರುಶಾಂತ, ಕನಕಪ್ಪ, ರಂಗರಾಜು, ಧರ್ಮಣ್ಣ, ಗೋಪಾಲ್, ಮುಂತಾದ ಭೂ ಸಂತಸ್ತ್ರ ಹೋರಾಟ ಸಮಿತಿ ಮುಖಂಡರು ಭಾಗವಹಿಸದ್ದರು