ಚಾಕೋ ಪೈ ಚಾಕೋಲೇಟ್ ನಲ್ಲಿ ಹುಳು ಪತ್ತೆ ಜಿಲ್ಲಾಧಿಕಾರಿಗಳಿಗೆ ದೂರು

Ravi Talawar
ಚಾಕೋ ಪೈ ಚಾಕೋಲೇಟ್ ನಲ್ಲಿ ಹುಳು ಪತ್ತೆ ಜಿಲ್ಲಾಧಿಕಾರಿಗಳಿಗೆ ದೂರು
WhatsApp Group Join Now
Telegram Group Join Now
ಬಳ್ಳಾರಿ.ಜೂನ್.19: ಮೂನ್ ವಾಕರ್ಸ್ ಸಾಂಸ್ಕೃತಿಕ ಕಲಾ ಸಂಘ ಇತ್ತೀಚೆಗೆ ನಡೆಸಿದ ವಾರ್ಷಿಕೋತ್ಸವ ಕಾರ್ಯಕ್ರಮದ ಸಲುವಾಗಿ ನಗರದ ದುರ್ಗಮ್ಮ ಗುಡಿ ಹತ್ತಿರ ಇರುವ ರೇಣುಕಾ ಬೇಕರಿಯಲ್ಲಿ ಬಿಸ್ಕತ್, ಜ್ಯೂಸ್ ಸೇರಿದಂತೆ ಇತರೆ ತಿನಿಸುಗಳನ್ನು ಖರೀಧಿಸಲಾಗಿತ್ತು. ಆದರೆ, ನಾವು ಖರೀದಿ ಮಾಡಿದ ಚಾಕೋಲೇಟ್ ಕವರ್ ಓಪನ್ ಮಾಡಿದಾಗ ಅದರಲ್ಲಿ ಹುಳು ಪತ್ತೆಯಾಗಿರುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಮಕ್ಕಳು ಇದನ್ನು ತಿಂದು ವಾಂತಿ ಮಾಡಿಕೊಂಡಿರುತ್ತಾರೆ, ಈ ವಿಷಯವನ್ನು ಚಾಕೋಲೇಟ್ ಸಮೇತವಾಗಿ ತಂದು ರೇಣುಕಾ  ಬೇಕರಿ ಗಮನಕ್ಕೆ ತಂದರೆ, ಬೇಕರಿ ಮಾಲೀಕರು ಕೇವಲವಾಗಿ ಮಾತನಾಡಿ, ನಾವು ಇದಕ್ಕೆ ಜವಬ್ಧಾರರಲ್ಲ, ಕಂಪನಿ ಇದಕ್ಕೆ ಜವಬ್ಧಾರಿ ಎಂದು ಹಾರಿಕೆ ಮಾತುಗಳನ್ನಾಡುತ್ತಾ ಲೇವಡಿ ಮಾಡಿರುತ್ತಾನೆ.
ಸೌಜನ್ಯಕ್ಕಾದರೂ ಚಾಕೋಲೇಟ್ ಕಂಪನಿಯ ರೆಪ್ರಜೆಂಟಿವ್ ಕರೆದು ಮಾತನಾಡಿಲ್ಲ ರೇಣುಕಾ ಬೇಕರಿಯ ಮಾಲಿಕರ ಮೇಲೆ ಮತ್ತು ಚಾಕೋಲೇಟ್ ಕಂಪನಿಯ ಮೇಲೆ ಕ್ರಮಕೈಗೊಂಡು ಬೇಕರಿಯನ್ನು ಬಂದ್ ಮಾಡಿಸಬೇಕು ಮತ್ತು ಚಾಕಲೇಟ್ ಗಳ ಮಾರಾಟವನ್ನು ನಗರದಲ್ಲಿ ನಿಷೇಧಿಸಬೇಕೆಂದು ಕರ್ನಾಟಕ ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಪೃಥ್ವಿರಾಜ್  ಮತ್ತು  ಜಿಲ್ಲಾಧ್ಯಕ್ಷ ವಸಂತಕುಮಾರ್   ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಮೂನ್ ವಾಕರ್ ಸದಸ್ಯರುಗಳು   ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
WhatsApp Group Join Now
Telegram Group Join Now
Share This Article