ಮುಡಾ ಕೇಸ್‌ನಲ್ಲಿ ಲೋಕಾ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೇಂದ್ರಕ್ಕೆ ದೂರು

Ravi Talawar
ಮುಡಾ ಕೇಸ್‌ನಲ್ಲಿ ಲೋಕಾ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೇಂದ್ರಕ್ಕೆ ದೂರು
WhatsApp Group Join Now
Telegram Group Join Now

ಮೈಸೂರು, ಮಾರ್ಚ್ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ನಡೆಸಿದ್ದು, ಈಗಾಗಲೆ ಹೈಕೋರ್ಟ್​ಗೆ ವರದಿ ಸಲ್ಲಿಕೆ ಮಾಡಿದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಸಾಕ್ಷ್ಯಾಧಾರಗಳಿದ್ದರೂ ಸುಳ್ಳು ವರದಿ ಸಲ್ಲಿಕೆ ಮಾಡಿದ್ದಾರೆಂದು ಮೂವರು ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ  ಲಿಖಿತ ದೂರು ನೀಡಿದ್ದಾರೆ.

ಭ್ರಷ್ಟ ರಾಜಕಾರಣಿ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯನವರ ಪ್ರಭಾವಕ್ಕೆ ಒಳಗಾಗಿ, ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ನಡೆದುಕೊಂಡಿರುವ ಬಗ್ಗೆ ವಿಚಾರಣೆ ನಡೆಸಿ, ಇವರಿಗೆ ನಿಜವಾಗಿಯೂ ಸಾಮಾನ್ಯ ಜ್ಞಾನ ಎಂಬುದು ಇಲ್ಲವೆ? ಅಥವಾ ಪ್ರಭಾವಕ್ಕೆ ಒಳಗಾಗಿ ತಮ್ಮ ಭೌದ್ಧಿಕತೆಯನ್ನು ಭ್ರಷ್ಟರಿಗೆ ಅರ್ಪಣೆ ಮಾಡಿರುತ್ತಾರೆಯೆ?ಇಂತಹವರಿಂದ ಭ್ರಷ್ಟಚಾರ, ಅಕ್ರಮ, ಅನ್ಯಾಯಗಳನ್ನು ತಡೆಯಲು ಸಾಧ್ಯವೆ? ಇಂತಹ ಅಧಿಕಾರಿಗಳು ಐ.ಪಿ.ಎಸ್.ಅಧಿಕಾರಿಗಳಾಗಿ ಮುಂದುವರೆಯುವುದು ಸೂಕ್ತವೆ? ಎಂಬುದನ್ನು ಖಚಿತಪಡಿಸಿಕೊಂಡು ಇವರುಗಳ ವಿರುದ್ದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.

WhatsApp Group Join Now
Telegram Group Join Now
Share This Article