ರಾಯಬಾಗ: ಗ್ರಾಮೀಣ ಭಾಗದ ಎಲ್ಲ ಸಮುದಾಯದವರ ದೇವಸ್ಥಾನಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ತಾಲೂಕಿನ ಮಾವಿನಹೊಂಡ ಗ್ರಾಮದ ಇಠ್ಠರಾಯ ದೇವಸ್ಥಾನ ಹತ್ತಿರ ಜಿ.ಪಂ. ಇಲಾಖೆಯಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ರಾಯಬಾಗ-ಸ್ಟೇಷನ ರಸ್ತೆಯಿಂದ ಸದಾಶಿವ ಮೇತ್ರಿ ತೋಟದ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದಲ್ಲಿ ತೋಟದ ರಸ್ತೆಗಳನ್ನು ಸುಧಾರಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದರು.
ಜಿ.ಪಂ.ಎಇಇ ವಿ.ಆರ್. ಭಜಂತ್ರಿ, ಎಇ ಎಸ್.ಎಸ್.ಹೊಸಮನಿ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ವಿ.ಎಸ್.ಪೂಜಾರಿ, ಮಹಾದೇವ ಲಕ್ಷ್ಮೇಶ್ವರ, ಸುರೇಶ ಚೌಗುಲಾ, ಪೃಥ್ವಿರಾಜ ಜಾಧವ, ಸುರೇಶ ಮಾಳಿ, ಮಹೇಶ ಕುಲಗುಡೆ, ಅಶೋಕ ಮೇತ್ರಿ, ಉಮೇಶ ಮೇತ್ರಿ, ದತ್ತಾ ಜಾಧವ, ಮಹೇಶ ಕರಮಡಿ, ಜಿಯಾವುಲ್ಲ ಮುಲ್ಲಾ, ಕಲ್ಲಪ್ಪ ಕಗ್ಗೂಡೆ, ಯಂಕಪ್ಪ ಲಕ್ಷ್ಮೇಶ್ವರ, ಸಿದ್ದಪ್ಪ ಒಡೆಯರ, ಭಾಗಪ್ಪ ನಡಟ್ಟಿ, ಅಶೋಕ ಯಳ್ಳೂರ, ರಮೇಶ ಪಾಟೀಲ, ಮಲ್ಲಪ್ಪ ನಡಟ್ಟಿ, ಯಲ್ಲಪ್ಪ ಕುಲಗುಡೆ, ಮಲ್ಲಪ್ಪ ಕುಲಗುಡೆ ಸೇರಿ ಅನೇಕರು ಇದ್ದರು.
ಫೋಟೊ: 18 ರಾಯಬಾಗ 1
ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಮಾವಿನಹೊಂಡ ಗ್ರಾಮದ ಇಠ್ಠರಾಯ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ ನೀಡಿದರು. ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ವಿ.ಎಸ್.ಪೂಜಾರಿ, ಮಹಾದೇವ ಲಕ್ಷ್ಮೇಶ್ವರ, ಸುರೇಶ ಚೌಗುಲಾ, ಕಲ್ಲಪ್ಪ ಕಗ್ಗೂಡೆ, ಯಂಕಪ್ಪ ಲಕ್ಷ್ಮೇಶ್ವರ, ಸಿದ್ದಪ್ಪ ಒಡೆಯರ, ಭಾಗಪ್ಪ ನಡಟ್ಟಿ, ಅಶೋಕ ಯಳ್ಳೂರ, ರಮೇಶ ಪಾಟೀಲ, ಮಲ್ಲಪ್ಪ ನಡಟ್ಟಿ, ಯಲ್ಲಪ್ಪ ಕುಲಗುಡೆ, ಮಲ್ಲಪ್ಪ ಕುಲಗುಡೆ ಸೇರಿ ಅನೇಕರು ಇದ್ದರು.