ಮೃತ್ಯುಂಜಯ ಅಪ್ಪನವರ ಸ್ಮರಣೋತ್ಸವ

Ravi Talawar
WhatsApp Group Join Now
Telegram Group Join Now

ಗದಗ,25: ಮಣಕವಾಡದ ಮಹಿಮಾ ಪುರುಷ ಶ್ರೀಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ ೧೨೮ ಹಾಗೂ ದ್ವಿತೀಂii ಪಿಯು ವಿಜ್ಞಾನ ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಮುಕ್ತಾಯ ಹಾಗೂ ಬಿಳ್ಕೋಡುಗೆ ಸಮಾರಂಭ ೨೬/೦೫/೨೦೨೪ ರಂದು ರವಿವಾರ ಮುಂಜಾನೆ  ೧೦:೩೦ ಕ್ಕೆ ನಗರದ ಲಖಾನೆ ಆಸ್ಪತ್ರೆಯ ಎದುರಿಗಿನ ಮೃತ್ಯುಂಜಯ ಗುರುಕುಲ ಆಶ್ರಮ ಸಭಾ ಭವನದಲ್ಲಿ ಜರುಗಲಿದೆ. ಹಿರಿಯ ಸಾಹಿತಿಗಳಾದ ಹಾಗೂ ಸೌಹಾರ್ದ ಮಹಾಮನೆ ವೇದಿಕೆಯ ಅಧ್ಯಕ್ಷರಾದ ಐ.ಕೆ.ಕಮ್ಮಾರ ಸಮಾರಂಭದ ಅಧ್ಯಕ್ಷತೆ  ವಹಿಸುವರು.

ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಈರಮ್ಮ ಮುತಗಾರ ಹಾಗೂ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷನಿಯರಾದ ಶ್ರೀಮತಿ ನಿರ್ಮಲಾ ತರವಾಡೆ ಹಾಗೂ ಪ್ರೊ. ಬಸವರಾಜ ನೆಲಜೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಐ.ಕೆ. ಕಮ್ಮಾರ ಅವರ ೧೯೭೭ನೇ ಸಾಲಿನ ಪಿಯುಸಿ ಗೆಳೆಯರಾದ ಜಗದೀಶ ಮಾಲಿಪಾಟೀಲ, ಚಂದ್ರು ಐಲಿ, ಕಳಕಪ್ಪ ಮೂಲಿಮನಿ, ಬಲಭೀರಸಿಂಗ ಜಮಾದಾರ, ಪ್ರಕಾಶ ಬಾರಟಕ್ಕೆ, ಸಂಕನೂರ, ಎಸ್.ಕೆ. ಮುದ್ಲಾಪೂರ, ಕುಲಕರ್ಣಿ ಮುಂತಾದವರು ಹಾಗೂ ಭಕ್ತರಾದ

ನಾಗಾವಿಯ ಮೃತ್ಯುಂಜಯ ಹಟ್ಟಿ, ಕೆ.ಬಿ. ಮರಡ್ಡಿ ಗುರುಗಳು, ಶಿವಣ್ಣ ಒಡೆಯರ, ಎಚ್.ಎನ್.ಕುರಿ, ಡಿ.ಜಿ.ಪಾಟೀಲ ರಾಜೇಂದ್ರ ಕಲಬುರ್ಗಿ, ಶಿವಶಂಕರಪ್ಪ ಆರಟ್ಟಿ  ಉಪಸ್ಥಿತರಿರುವರು.

ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪೂಜ್ಯ ಮೃತ್ಯುಂಜಯ ಅಪ್ಪನ ಕೃಪೆಗೆ ಪಾತ್ರರಾಗಲು ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಂ, ಅಕ್ರಂ, ಸ್ನೇಹಾ, ಸಹನಾ, ಮಧು, ನೀಲಮ್ಮ, ಭೂಮಿಕಾ ಮುಂತಾದವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 

WhatsApp Group Join Now
Telegram Group Join Now
Share This Article