ಬೆಳೆ ಪರಿಹಾರ ಜಮೆ ಅಗದ ರೈತರು ಬ್ಯಾಂಕ್ ಖಾತೆ ಪರಿಶೀಲಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

Ravi Talawar
ಬೆಳೆ ಪರಿಹಾರ ಜಮೆ ಅಗದ ರೈತರು ಬ್ಯಾಂಕ್ ಖಾತೆ ಪರಿಶೀಲಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
WhatsApp Group Join Now
Telegram Group Join Now
ಧಾರವಾಡ, ಮೇ.21: ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಅಗದೆ ಇರುವ ರೈತರು ತಾವು ಖಾತೆ ಹೊಂದಿರುವ ಬ್ಯಾಂಕಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪಡೆಟ್ ಆಗಿರುವ ಬಗ್ಗೆ ಮತ್ತು ಪ್ರೂಟ್ಸ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ, ಖಾತರಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕೌಂಟ್‍ಗಳನ್ನು ನಿಬರ್ಂಧಿಸಿರುವುದು ಅಥವಾ ಫ್ರೀಜ್ ಮಾಡಿರುವುದು ಹಾಗೂ ಯಾವ ರೈತರ ಖಾತೆಯನ್ನು ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಅಕೌಂಟ್ ರಿ ಓಪನ್ ಮಾಡಿಸಬೇಕು. ಫ್ರೂಟ್ಸ್ ಅಪ್‍ಡೇಟ್‍ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗುತ್ತಿಲ್ಲ ಆ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್ಡೇಟ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್‍ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್, ಕುಸಿದ ಪಾವತಿ ಹಾಗೂ ಎನ್.ಪಿ.ಸಿ.ಐ ಸೀಡಿಂಗ್ ಸಮಸ್ಯೆ ಇರುವಂತ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಎನ್.ಪಿ.ಸಿ.ಐ (ಓPಅI) ಮಾಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅಮಾನ್ಯ ಸ್ವೀಕೃತ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಐ.ಎಫ್.ಎಸ್.ಸಿ ಕೋಡ್ ಅಪ್ಡೇಟ್ ಮಾಡಿಸಿ ಎನ್.ಪಿ.ಸಿ.ಐ ಮಾಡಿಸಬೇಕು.
ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ರೈತರು ಆಯಾ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಥವಾ ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article