ಧಾರವಾಡ: ಮರಾಠರು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು. ಶೌರ್ಯ, ಧೈರ್ಯ. ಬಲಿಷ್ಠತೆಗೆ ಹೆಸರುವಾಸಿ. ಮರಾಠ ಸಮಾಜವು ಇತಿಹಾಸದ ಉದ್ದಕ್ಕೂ ಒಳ್ಳೆಯ ಕೆಲಸಗಳನ್ನು ಮಾಡಿದೆ. ನಮ್ಮ ಯುವ ಸಮುದಾಯ ಮರಾಠಾ ಸಮಾಜದ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ವತಿಯಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಮರಾಠಾ ವಿದ್ಯಾಪ್ರಸಾರಕ ಮಂಡಳದ ವೆಬ್‌ಸೈಟ್ ಉದ್ಘಾಟನೆ ಹಾಗೂ ಆಡಳಿತ ಕಚೇರಿ ಮತ್ತು ವಿಜ್ಞಾನ ಪಪೂ ಮಹಾವಿದ್ಯಾಲಯದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮರಾಠಾ ಸಮಾಜವು ಮುಸ್ಲಿಂರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮರಾಠರು ಎಂದಿಗೂ ಮುಸ್ಲಿಂ ವಿರೋಧಿಯಾಗಿಲ್ಲ, ಮರಾಠರು ಧರ್ಮದ ವಿರುದ್ಧ ನಡೆದವರಿಗೆ ಬುದ್ದಿ ಕಲಿಸಿದ್ದಾರೆ. ಆದರೆ, ಶಿವಾಜಿ ಮಹಾರಾಜರ ಬಗ್ಗೆ ಮಾತ ನಾಡುವವರ ಮನೆಯಲ್ಲಿ ಒಂದೇ ಒಂದು ಶಿವಾಜಿ ಮಹಾರಾಜರ ಫೋಟೋ ಇರುವುದಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು. ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ನೇತೃತ್ವದಲ್ಲಿ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡಿ ಮರಾಠ ಸೇರಿದಂತೆ ಇತರ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ಸದ್ಯ ನಿರ್ಮಿಸುವ ಕಟ್ಟಡಕ್ಕೆ ಸಿಂಹಪಾಲಿನ ವೆಚ್ಚವನ್ನು ನಾನು ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು
ಪ್ರತಿ ಸಮಾಜ ನಮ್ಮದು ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮಾಜ ಎನ್ನುತ್ತಲೇ ಇರುತ್ತಾರೆ. ಆದರೆ, ನಾವು ಹಾಗನ್ನಬಾರದು. ಮರಾಠಾ ಸಮಾಜದ ಮುಖಂಡರು ರಾಜ್ಯದಲ್ಲೆಡೆ ಯಿಂದ ನಿಖರ ಮಾಹಿತಿ ಸಂಗ್ರಹಿಸಿ ನೀಡಿದರೆ ಆಗ ಸರಕಾರದ ಮಟ್ಟದಲ್ಲಿ ಸಮಾಜದ ಬಗೆಗೆ ಮಾತನಾಡಲು ಅನುಕೂಲವಾಗುತ್ತದೆ ಎಂದರು.
ಮರಾಠಾ ವಿದ್ಯಾ ಪ್ರಸಾರಕ ಮಂಡಳ ದಿಂದ ಈಗಾಗಲೇ ಎಲ್ ಕೆಜಿಯಿಂದ ಪಿಜಿ ವರೆಗೆ ವಿದ್ಯಾಸಂಸ್ಥೆ ಆರಂಭಿಸಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಧಾರವಾಡದಲ್ಲಿ ಮರಾಠಾ ಮಂಡಳದಿಂದ ಸಮೀಪದಲ್ಲಿ ಜಾಗ ಹುಡುಕಿದರೆ ಶೀಘ್ರದಲ್ಲಿಯೇ ಎಂಜನೀಯರಿಂಗ್ ಆರಂಭಿಸೋಣ ಎಂದರು. ಕಾಲೇಜು
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಸರಜೂ ಕಾಟ್ಕರ್ ಮಾತನಾಡಿ, 132 ವರ್ಷಗಳ ಹಿಂದೆ ಮರಾಠಾ ವಿದ್ಯಾ ಪ್ರಸಾರಕ ಮಂಡಳ ಸಂಸ್ಥೆ ಯನ್ನು ಮರಾಠಾ ಸಮಾಜದ ಮುಖಂಡರು ಆರಂಭಿಸಿದ್ದನ್ನು ಸರಿಸಿದರೆ ಇಂದಿಗೂ ರೋಮಾಂಚನವಾಗುತ್ತದೆ. ಆದ್ದರಿಂದ
ಮರಾಠಾ ವಿದ್ಯಾಪ್ರಸಾರಕ ಮಂಡಳದ ದಿನಾಚರಣೆ ಮಾಡುವ ಮೂಲಕ ಅವರನ್ನು ವತಿಯಿಂದ ಪ್ರತಿ ವರ್ಷ ಸಂಸ್ಥಾಪನಾ ಸ್ಮರಿಸುವ ಕೆಲಸ ಆಗಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಾತನಾಡಿ, ಯಾವುದೇ ಸಮಾಜ ಮುನ್ನಡೆ ಯಲು ನಾಯಕತ್ವ ಮುಖ್ಯ ಎಂದರು.
ಪಾಲಿಕೆ ಸದಸ್ಯ ಡಾ ಮಯೂರ ಮೋರೆ ಮಾತನಾಡಿ, ಸಂಸ್ಥೆಯು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಆಡಳಿತ ಮಂಡಳಿಯ ಶ್ರಮ ಹೆಚ್ಚಿದೆ. ಅದರ ಜತೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಒಗ್ಗಟ್ಟಾಗಿ ನಡೆಸಿದ ಹಿನ್ನೆಲೆಯಲ್ಲಿ ಇಂದು ದೊಡ್ಡ ಮಟ್ಟದಲ್ಲಿ ಸಂಸ್ಥೆ ಬೆಳೆದಿದೆ. ಸಂಸ್ಥೆಯಿಂದ ಕಟ್ಟುವ ವಸತಿ ಕಟ್ಟಡಕ್ಕೆ ಡಾ.ಮಯೂರ ಮೋರೆ ಫೌಂಡೇಶನ್ ವತಿಯಿಂದ 5 ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
ಮರಾಠಾ ಮಂಡಳದ ಅಧ್ಯಕ್ಷ ಮನೋಹನ ಮೋರೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸನ್ಮಾನಿಸ ಲಾಯಿತು. ಹು-ಧಾ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಕರಣ, ಉಲಕ ಯಾರು ಸಂತೋಷ ಪ್ರಕಾಶ ಘಾಟಗೆ, ಯಲ್ಲಪ್ಪ ಚವ್ಹಾಣ ಉಪಸ್ಥಿತರಿದ್ದರು.