ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಕುಸಿತ: 12 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಮುಳುಗಡೆ ಸಾಧ್ಯತೆ

Ravi Talawar
ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಕುಸಿತ: 12 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಮುಳುಗಡೆ ಸಾಧ್ಯತೆ
WhatsApp Group Join Now
Telegram Group Join Now

ಹೊಸಪೇಟೆ: ತುಂಗಭದ್ರಾ ಅಣೆಕಟ್ಟಿನಿಂದ ನಿನ್ನೆ ಭಾನುವಾರ ಮಧ್ಯಾಹ್ನದಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿದ್ದು, ಅಣೆಕಟ್ಟಿನ ಕ್ರೆಸ್ಟ್ ಗೇಟ್‌ ಒಡೆದ ಪರಿಣಾಮ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಸುಮಾರು 12 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಮುಳುಗಡೆಯಾಗುವ ಸಾಧ್ಯತೆಯಿದೆ.

ಅಣೆಕಟ್ಟಿನಿಂದ 1.5 ಲಕ್ಷ ಕ್ಯೂಸ್‌ಗಿಂತ ಹೆಚ್ಚಿನ ನೀರನ್ನು ಹೊರಬಿಟ್ಟಾಗ, ಪ್ರವಾಹದಿಂದಾಗಿ ಅನೇಕ ಕೃಷಿ ಕ್ಷೇತ್ರಗಳು ಜಲಾವೃತವಾಗುತ್ತವೆ ಮತ್ತು ಪ್ರಸ್ತುತ ಅಣೆಕಟ್ಟು 2 ಲಕ್ಷ ಕ್ಯೂಸೆಕ್ ದಾಟಿದೆ. ಇದರಿಂದಾಗಿ ರೈತರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲಾಗದೆ ಚಿಂತೆಗೀಡುಮಾಡುವಂತೆ ಮಾಡಿದೆ.

ಮುರಿದು ಬಿದ್ದಿರುವ ಕ್ರೆಸ್ಟ್ ಗೇಟ್‌ನ ಶೀಘ್ರ ದುರಸ್ತಿ ಮಾಡಲು ಹೊರಹರಿವನ್ನು 3 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲು ಅಧಿಕಾರಿಗಳು ಯೋಜಿಸಿದ್ದಾರೆ. ನೀರು 3 ಲಕ್ಷ ಕ್ಯೂಸೆಕ್‌ಗೆ ತಲುಪಿದರೆ ಹೆಚ್ಚಿನ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗುವ ಭೀತಿ ಎದುರಾಗಲಿದೆ ಎನ್ನುತ್ತಾರೆ ರೈತರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾದಾಗ ಅಣೆಕಟ್ಟು ನಿರ್ವಹಣೆ ಮಾಡುವಲ್ಲಿ ಟಿಬಿ ಅಣೆಕಟ್ಟು ಮಂಡಳಿ ವಿಫಲವಾಗಿದೆ ಎಂದು ಹೊಸಪೇಟೆಯ ಕೆಲವು ರೈತರು ಆರೋಪಿಸಿದರು. ಆಗಸ್ಟ್ 13 ರಂದು ಅಣೆಕಟ್ಟೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲು ರೈತ ಸಂಘಟನೆಗಳು ಮುಂದಾಗಿವೆ.

WhatsApp Group Join Now
Telegram Group Join Now
Share This Article