ಹುನಗುಂದ;: ರೈತರ ಸಂಕ?ಕ್ಕೆ ಸಹಕಾರಿ ಸಂಘ ಆರ್ಥಿಕವಾಗಿ ನೆರವಾಗುತ್ತದೆ. ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಆರಂಭಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲ್ಲೂಕಿನ ಹಿರೇಬಾದವಾಡಗಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ರೈತರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸಂಘದ ಪ್ರಗತಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಹಿರೇಬಾದವಾಡಗಿ ಸೇರಿದಂತೆ ಮತಕ್ಷೇತ್ರದ ರಕ್ಕಸಗಿ, ಹಿರೇಮಳಗಾವಿಯಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಆರಂಭಿಸಲಾಗಿದೆ. ಎಂದರು.
ವಸತಿ ನಿಲಯ, ಸಮುದಾಯ ಭವನ ನಿರ್ಮಾಣ, ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಲಯ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ಶೀಥಿಲಾವ್ಯಸ್ಥೆಯಿಂದ ದುರಸ್ಥಿ ಸೇರಿದಂತೆ ಇತರೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಶಾಸಕರಿಗೆಮನವಿ ಸಲ್ಲಿಸಿದರು. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ರಾಜಶೇಖರ ಪರೂತಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮಹಾದೇವ ಕುಂಬಾರ, ಹುನಗುಂದ ಶಾಖೆಯ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಮುಖಂಡರಾದ ಶಿವಾನಂದ ಕಂಠಿ, ಮಹಾಂತೇಶ ಅವಾರಿ, ಸಂಗಣ್ಣ ಗಂಜೀಹಾಳ, ಮಹಾಂತೇಶ ನರಗುಂದ, ಬಸವಂತಪ್ಪ ಅಂಟರತಾನಿ, ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಕಲಗೋಡಿ, ಉಪಾಧ್ಯಕ್ಷೆ ಪದ್ಮಾವತಿ ಸಿಂಗನಗುತ್ತಿ, ಸಿ. ಡಿ. ಕಂದಕೂರ, ಎಸ್. ಆರ್. ಬಾಡಗಿ, ಜಿ.ಎಚ್ ಇಲಕಲ್ ಇತರರಿದ್ದರು.
ರೈತರ ಸಂಕಷ್ಟಕ್ಕೆ ಸಹಕಾರಿ ಸಂಘ ಆರ್ಥಿಕವಾಗಿ ನೆರವಾಗುತ್ತದೆ : ಕಾಶಪ್ಪನವರ
