ರೈತರ ಹೋರಾಟ ಕಡೆ ಬರೀ ಕೈ ಬೀಸಿದ ಸಿಎಂ

Ravi Talawar
ರೈತರ ಹೋರಾಟ ಕಡೆ ಬರೀ ಕೈ ಬೀಸಿದ ಸಿಎಂ
WhatsApp Group Join Now
Telegram Group Join Now

ಬೆಳಗಾವಿ: ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವುದು, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದರು.

ನೂತನ ಬಸ್ ನಿಲ್ದಾಣ ವೀಕ್ಷಣೆ ಮಾಡಿ ಬಿಮ್ಸ್ ಸೂಪರ್ ಶ್ಪೇಶಾಲಿಟಿ ಆಸ್ಪತ್ರೆಯ ಲೋಕಾರ್ಪಣೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ನಡೆಸುತ್ತಿರುವ ಪ್ರತಿಭಟನೆ ಕಂಡು ಕಾರಿನಲ್ಲಿಯೇ ಕೈ ಮಾಡಿ ತೆರಳಿದರು.

ಅತಿವೃಷ್ಟಿ ಮಳೆಯಿಂದ ಕಾಳು ಕಡಿ ಧಾನ್ಯ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೊಂದರೆಯಲ್ಲಿದ್ದಾರೆ. ಆದ್ದರಿಂದ ಸೊಯಾಬಿನ್, ಹೆಸರು, ಉದ್ದು, ಮೆಕ್ಕೆಜೋಳ, ತೊಗರಿ, ಹತ್ತಿ, ಬಟಾಟಿ, ಕಬ್ಬು ಹೆಚ್ಚುಕಡಿಮೆ ಉತ್ತರ ಕರ್ನಾಟಕ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದೆ ಪ್ರತಿ ಎಕರೆಗೆ 40 ಸಾವಿರ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

 

WhatsApp Group Join Now
Telegram Group Join Now
Share This Article