ಸಿಎಂ ‘ಸೋಮಾರಿ’ ಸಿದ್ದು : ನಟ ಚೇತನ್ ವ್ಯಂಗ್ಯ

Ravi Talawar
ಸಿಎಂ ‘ಸೋಮಾರಿ’ ಸಿದ್ದು : ನಟ ಚೇತನ್ ವ್ಯಂಗ್ಯ
WhatsApp Group Join Now
Telegram Group Join Now

ಬೆಂಗಳೂರು,20: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ ಗಳಿಗೆ ಬಾಬಾಸಾಹೇಬ್ ಅವರ ಅನೀಹಿಲೇಷನ್ ಆಫ್ ಕಾಸ್ಟ್ ಕೃತಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಕೊಟ್ಟಿರುವುದಕ್ಕೆ ನಟ ಚೇತನ್, ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ “ಕೃತಿಯ ಪ್ರತಿಯನ್ನು ಸಿಎಂ ‘ಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ ಎಂದು ಟೀಕಿಸಿದ್ದಾರೆ.

ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ), ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಅಪಹರಿಸಲು ಪ್ರಯತ್ನಿಸುತ್ತಾರೆ.

ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು, ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ. ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ.

ಚೇತನ್‌ ಇಂಥ ಅಪ್ರಾಸಂಗಿಕ, ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ನಟ ಚೇತನ್ ವಿರುದ್ಧ ವಕೀಲರೊಬ್ಬರು ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಚೇತನ್ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದರು.

WhatsApp Group Join Now
Telegram Group Join Now
Share This Article