ಕೊಪ್ಪಳ : ಸರ್ಕಾರದ ಸಾಧನೆಗಳನ್ನು ತಿಳಿಸಲು ಮೇ 20ರಂದು ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಈ ಸಮಾವೇಶದಲ್ಲಿ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು. ಬೇರೆ ಇಲಾಖೆಗಳ ಕಾರ್ಯಕ್ರಮಗಳೂ ಇದರಲ್ಲಿವೆ” ಎಂದರು.
ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇದೇ ಸಿಎಂ, ಆಪರೇಷನ್ ಸಿಂಧೂರ ವಿಷಯವಾಗಿ ಮಾತನಾಡಿ, “ಕಾಂಗ್ರೆಸ್ ಶಾಸಕರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ತಮ್ಮದೇ ಹೇಳಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಕದನ ವಿರಾಮದ ಬಗ್ಗೆ ಹೇಳಿಕೆ ನೀಡಿದ್ದರು. ನಿನ್ನೆ ಮತ್ತೊಂದು ಹೇಳಿಕೆ ನೀಡಿದ್ದಾರೆ.
ನನ್ನ ಪ್ರಕಾರ ಮೊದಲು ಹೇಳಿದ ಹೇಳಿಕೆ ಸರಿ ಇರಬಹುದು. ಕದನ ವಿರಾಮದಿಂದ ಉಗ್ರರಿಗೆ ನೆಲೆ ನೀಡಿರುವ ಪಾಕಿಸ್ತಾನದವರಿಗೆ ಮತ್ತೊಂದು ಅವಕಾಶ ಸಿಕ್ಕಂತಾಯಿತು. ಇದಕ್ಕೆಲ್ಲ ಅವಕಾಶ ನೀಡದೇ ಭಯೋತ್ಪಾದನೆಯನ್ನು ನಾಶ ಮಾಡಬೇಕು” ಎಂದು ಹೇಳಿದರು.
“ಈ ಹಿಂದೆ ನಾನು ಯುದ್ಧದ ಅಗತ್ಯ ಇಲ್ಲ. ಅನಿವಾರ್ಯತೆ ಇದ್ದರೆ ಮಾಡಲಿ ಎಂದಿದ್ದೆ. ನೀವು ಕೇವಲ ಯುದ್ಧ ಬೇಡ ಎಂಬುದನ್ನು ಮಾಧ್ಯಮದಲ್ಲಿ ತೋರಿಸಿದ್ದೀರಿ. ನಾನು ಯುದ್ಧ ಬೇಡವೇ ಬೇಡ ಎಂದಿಲ್ಲ. ಎಂದು ಹೇಳಿದರು.