ಘಟಪ್ರಭಾ: ಇಲ್ಲಿನ ಶಿವಯೋಗಿ ಟೇಕ್ವಾoಡೋ ಸ್ಪೋರ್ಟ್ ಅಕಾಡಿಮೆ ವಿದ್ಯಾರ್ಥಿಗಳು 42 ರಾಜ್ಯ ಟೇಕ್ವಾಡೋ ಚಾಂಪಿಯನ್ ನಲ್ಲಿ ಚಿನ್ನದ ಪದಕ ಪಡೆದ ಪ್ರಯುಕ್ತ ರಾಜ್ಯದ ಮುಖ್ಯ ಮಂತ್ರಿ ಸಿದ್ರಾಮಯ್ಯ ಅವರು ಚಾಂಪಿಯನ್ ರನ್ನು ಸನ್ಮಾನಿಸಿದರು.
ಈ ಒಂದು ಸಮಾರಂಭದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ರಂಗನಾಥ ನಾವಿ, ಅನುಷ್ಕಾ ಮೇತ್ರಿ, ಉತ್ತಮ ಕಟೋಜಿ, ಸತೀಶ ಮೇತ್ರಿ, ಸುಪ್ರಿತ ನಾಯಕ, ಸುಶ್ಮಿತಾ ಮೇತ್ರಿ, ಶಿವಂ ಕುಲಗೋಡ, ಸಲೋನಿ ಮೇತ್ರಿ, ರಘುನಾಥ ನಾವಿ,ಗೋವಿಂದ ಮೇತ್ರಿ ಈ ಎಲ್ಲ ಚಾಂಪಿಯನ್ ವಿದ್ಯಾರ್ಥಿಗಳಿಗೆ ಸಿ ಎಮ್ ಸಿದ್ರಾಮಯ್ಯ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮ್ಮದ ಖಾನ್,ಘಟಪ್ರಭಾ ಕರಾಟೆ ತರಬೇತುದಾರರಾದ ಲಕ್ಷ್ಮಣ ಮೇತ್ರಿ, ಅರ್ಜುನ ಬೀಳಗಿಕರ, ರಾಮಚಂದ್ರ ಬೀಳಗಿಕರ ಇದ್ದರು.