ನಾಳೆ ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

Ravi Talawar
ನಾಳೆ ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ
WhatsApp Group Join Now
Telegram Group Join Now

ಆಲಮಟ್ಟಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆ.6 ಶನಿವಾರ ಮಧ್ಯಾಹ್ನ 12 ಕ್ಕೆ ಕೃಷ್ಣೆಗೆ ಆಲಮಟ್ಟಿ ಯಲ್ಲಿ ಬಾಗಿನ ಅರ್ಪಿಸಲಿದ್ದಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಾಗಿನ ಅರ್ಪಣೆಯ ನಂತರ ಪ್ರವಾಸಿ ಮಂದಿರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದರು. ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ‌ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ ಎಂದರು. ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

ಬೆಳಗಾವಿ ಐಜಿಪಿ ಬಂದೋಬಸ್ತ ನೇತೃತ್ವ ವಹಿಸಲಿದ್ದಾರೆ. ಇಬ್ಬರು ಎಸ್.ಪಿ, ಆರು ಜನ ಡಿವೈಎಸ್ ಪಿ, 13 ಸಿಪಿಐ, 32 ಪಿಎಸ್ಐ, 24 ಎಎಸ್ಐ, 90 ಜನ ಹೆಡ್ ಕಾನ್ಸಟೇಬಲ್, 242 ಪೊಲೀಸ್ ಕಾನ್ಸಟೇಬಲ್, 24 ಜನ ಮಹಿಳಾ ಕಾನ್ಸಟೇಬಲ್ ‌ಜತೆಗೆ ಕೆಎಸ್ಐಎಸ್ ಎಫ್ ಪೊಲೀಸರು ಬಂದೋ ಬಸ್ತಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದರು.

WhatsApp Group Join Now
Telegram Group Join Now
Share This Article