ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಹೇಳಿ ವಿವಾದ ಸೃಷ್ಟಿಸಿರುವ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೆಚ್ಚು ಸಮತೋಲನದಿಂದ ಮಾತಾಡಿದರು.
ಸಿದ್ದರಾಮಯ್ಯ ಆಗಬೇಕು, ಶಿವಕುಮಾರ್ ಆಗಬೇಕು ಅಂತ ಹೇಳುವುದು ತಪ್ಪು ಎಂದ ಅವರು ಹೈಕಮಾಂಡ್ ಪದದ ಬಳಕೆಯೇ ಸರಿಯಲ್ಲ, ಕೇಂದ್ರದ ವರಿಷ್ಠರು ಇಲ್ಲಿನ ಕಾರ್ಯಕರ್ತರ ಮತ್ತು ಶಾಸಕರ ಆಶಯಗಳ ಮೇರೆಗೆ ಮುಖ್ಯಮಂತ್ರಿಯನ್ನು ನೇಮಕ ಮಾಡಬೇಕು, ನೇರವಾಗಿ ಮಾಡುವಂತೆ ಇಲ್ಲ, ತನ್ನ ವಿಷಯದಲ್ಲಿ ಎರಡೂ ಅಗಿದೆ ಎಂದರು.
ಮೊದಲ ಬಾರಿಗೆ ಕೇಂದ್ರದವರು ಬೇರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಿದ್ದರು, ಆದರೆ ಶೇಕಡ 90 ರಷ್ಟು ಶಾಸಕರು ತನ್ನ ಪರವಾಗಿದ್ದ ಕಾರಣ ಮುಖ್ಯಮಂತ್ರಿಯಾಗಿ ತನ್ನನ್ನು ನೇಮಕ ಮಾಡಲಾಯಿತು, 80ರ ದಶಕದಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಗತಿ ನಡೆದ ಕಾರಣ ತಾನು ಸಿಎಂ ಆಗಲಿಲ್ಲ ಎಂದು ಮೊಯ್ಲಿ ಹೇಳಿದರು.