ಕೋಮಾದಲ್ಲಿ ‘ಕೈ’ ಸರ್ಕಾರ; ರಾಜ್ಯಕ್ಕೆ ಸಿಎಂ ಯಾರು ?: ಶ್ರೀರಾಮುಲು ವಾಗ್ದಾಳಿ

Ravi Talawar
ಕೋಮಾದಲ್ಲಿ ‘ಕೈ’ ಸರ್ಕಾರ; ರಾಜ್ಯಕ್ಕೆ ಸಿಎಂ ಯಾರು ?: ಶ್ರೀರಾಮುಲು ವಾಗ್ದಾಳಿ
WhatsApp Group Join Now
Telegram Group Join Now
ಬಳ್ಳಾರಿ,ಜು.೧೭: ಬಿಜೆಪಿಯಲ್ಲಿ ರಾಮುಲು ಇಲ್ಲದೆ ರಾಜಕಾರಣ ಸಾಧ್ಯವಿಲ್ಲ” ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರದ ಸ್ಥಿತಿಗತಿಯ ಬಗ್ಗೆ ಗಂಭೀರವಾದ ಆರೋಪಗಳನ್ನು ಮಾಡಿದರು. ರಾಜ್ಯ ರಾಜಕೀಯದ ಅವ್ಯವಸ್ಥೆಯನ್ನು ಚರ್ಚಿಸುತ್ತಾ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಈ ರಾಜ್ಯಕ್ಕೆ ನಿಜವಾದ ಮುಖ್ಯಮಂತ್ರಿ ಯಾರು ಎಂಬುದೇ ಸ್ಪಷ್ಟವಿಲ್ಲ. ಸಿದ್ದರಾಮಯ್ಯನವರೇ ಆಗಿದ್ದರೆ ಸರಿಯಾಗಿ ಹೇಳಲಿ, ಇಲ್ಲದಿದ್ದರೆ ಸುರ್ಜೆವಾಲಾ ಅವರೇ ನೈಜವಾಗಿ ರಾಜ್ಯವನ್ನು ನಿರ್ವಹಿಸುತ್ತಿರುವರೆಂದು ಗೊತ್ತಾಗಲಿ ಎಂದು ವ್ಯಂಗ್ಯವಾಡಿದರು.
ಈ ಸರ್ಕಾರ ಕೋಮಾ ಸ್ಥಿತಿಯಲ್ಲಿ ಇದೆ, ಸಿಎಂ ಸಿದ್ದರಾಮಯ್ಯ ಐಸಿಯುನಲ್ಲಿದ್ದಾರೆ. ಸುರ್ಜೆವಾಲಾ ದೆಹಲಿಯಿಂದ ಬಂದು ಶಾಸಕರನ್ನು ಕರೆದು ಸಭೆ ಮಾಡುತ್ತಿರುವುದು ಸಿಎಂ ಬದಲಾವಣೆಗೆ ನೆಲೆ ಬಡಿಸುತ್ತಿರುವಂತೆ ಇದೆ. ಸರ್ಕಾರ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಶೂನ್ಯ ಆಸಕ್ತಿಯುಳ್ಳ ಸ್ಥಿತಿಯಲ್ಲಿ ಇದೆ, ಎಂದು ಟೀಕಿಸಿದರು.
ಸಿದ್ದರಾಮಯ್ಯ ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿ ಪ್ರದರ್ಶನದ ಉದ್ದೇಶವನ್ನು ಪ್ರಶ್ನಿಸಿದ ಅವರು, ಹೈಕಮಾಂಡ್ ಅವರನ್ನು ಕರೆದಿದ್ದರೂ, ಅವರ ನಾಯಕತ್ವ ಶಕ್ತಿಯನ್ನ ತೋರಿಸಲು ಸಿದ್ದರಾಮಯ್ಯ ಮುಂಚೆ ಸಮಾವೇಶ ಆಯೋಜಿಸಿದ್ದಾರೆ ಎಂದರು.
“ಬಳ್ಳಾರಿಯ ಕ್ಯಾಂಸರ್ ವಿಭಾಗದಲ್ಲಿ ರೇಡಿಯೋ ಥೆರಪಿ ಯಂತ್ರ ಇದ್ದರೂ ಅದು ಕಾರ್ಯನಿರತವಲ್ಲ. ಇದು ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಉದಾಹರಣೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಿರ್ಮಾಣದಲ್ಲಿರುವ ಕ್ಲಾಕ್ ಟವರ್ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಅರ್ಧಪೂರ್ತಿಯಾದ ಯೋಜನೆಗೆ ಉದ್ಘಾಟನೆ ಮಾಡಲು ಸಿಎಂ ಬರಬೇಕೆಂಬುದು ಹಾಸ್ಯಸ್ಪದ, ಎಂದು ನಗರ ಶಾಸಕರನ್ನು ಟೀಕಿಸಿದರು.
ತುಂಗಭದ್ರಾ ಡ್ಯಾಮಿನಿಂದ ಸುಮಾರು ೫೦ ಟಿಎಂಸಿ ನೀರು ವ್ಯರ್ಥವಾಗಿದೆ. ಮಾಜಿ ಸಚಿವ ಆನಂದ್ ಸಿಂಗ್ ಶುಗರ್ ಫ್ಯಾಕ್ಟರಿಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಸರಕಾರ ನಿರಾಕರಿಸಿದೆ. ಜಮೀರ್ ಅಹ್ಮದ್ ಖಾನ್ ಅವರು ಹೊಸ ಫ್ಯಾಕ್ಟರಿ ಸ್ಥಾಪನೆಯ ಸುಳ್ಳು ಭರವಸೆ ನೀಡುತ್ತಿದ್ದಾರೆ, ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಲಿಂಗರಾಜು ಅವರು ಪ್ರಿಯಾಂಕಾ ಖರ್ಗೆ ಸಮೀಪದವರು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು, ಎಂದು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಅಕ್ರಮ ಚಟುವಟಿಕೆಗಳ ಆರೋಪ
ಬಳ್ಳಾರಿಯಲ್ಲಿ ಗಾಂಜಾ, ಡ್ರಗ್ಸ್, ಮಟ್ಕಾ, ಇಸ್ಪೀಟ್ ಮುಂತಾದ ಅಕ್ರಮ ಚಟುವಟಿಕೆಗಳು ಅಬ್ಬರದಿಂದ ನಡೆಯುತ್ತಿವೆ. ಕಾಲೇಜುಗಳ ಸುತ್ತಮುತ್ತ ಡ್ರಗ್ಸ್ ಮಾರಾಟವಾಗುತ್ತಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ, ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ಸಣ್ಣಖರ್ಗೆ ಅವರ ಶಿಷ್ಯ ಲಿಂಗರಾಜ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿದ್ದಾರೆ ಎಂಬುದನ್ನೂ ಅವರು ಹೇಳಿದ್ದಾರೆ.
WhatsApp Group Join Now
Telegram Group Join Now
Share This Article