ಸಿಎಂ ಚಿನ್ನದ ಪದಕ : ಪಿ.ಎಸ್.ಐ  ಪರಶುರಾಮ ಆಯ್ಕೆ

MK HasiruKranti
ಸಿಎಂ ಚಿನ್ನದ ಪದಕ : ಪಿ.ಎಸ್.ಐ  ಪರಶುರಾಮ ಆಯ್ಕೆ
WhatsApp Group Join Now
Telegram Group Join Now
ಸಿರುಗುಪ್ಪ30..in : ಇಲ್ಲಿನ ಪೊಲೀಸ್ ಠಾಣೆಯ ಪಿ.ಎಸ್.ಐ ಪರಶುರಾಮ ಅವರು 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಶಾಹಪುರಿನ ಪರಶುರಾಮ ಅವರು ಬಳ್ಳಾರಿ ಜಿಲ್ಲೆಯಲ್ಲಿ ಪಿ.ಎಸ್.ಐ ಆಗಿ ನಿಯೋಜನೆಗೊಂಡಿದ್ದರು. ಬಳಿಕ ಬಳ್ಳಾರಿಯ ಎ.ಪಿ.ಎಂ.ಸಿ ಮತ್ತು ಮೋಕಾ ಠಾಣೆಯಲ್ಲಿ  ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಜನಸ್ನೇಹಿ ಪಿ.ಎಸ್.ಐ ಎಂದು ಗುರುತಿಸಿಕೊಂಡಿದ್ದರು. ವಿವಿಧ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಉತ್ತಮ ಸೇವೆ ಸಲ್ಲಿಸಿದ್ದರು. ಸದ್ಯ ಅವರು ಸಿರುಗುಪ್ಪ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
WhatsApp Group Join Now
Telegram Group Join Now
Share This Article