ಬಳ್ಳಾರಿ, ಏ.11.ರ್ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಲ್ಲಿ ಬಳ್ಳಾರಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಬಳ್ಳಾರಿ ಹೊರವಲಯದ ಬಂಡಿಹಟ್ಟಿ ಪ್ರದೇಶದ ರೆಡ್ಡಿ ಕಾಂಪೌಂಡ್ ಸರ್ವೇ ನಂಬರ್ 318ರಲ್ಲಿ 3.13 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಮಾಡಿಕೊಂಡಿದ್ದನ್ನು ಜಿಲ್ಲಾ ಆಡಳಿತ ಇಂದು ತೆರವುಗೊಳಿಸಿದೆ.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಅವರು ಸಿಬ್ಬಂದಿಯೊಂದಿಗೆ ತೆರಳಿ.ಕೋಟ್ಯಾಂತರ ರೂಪಾಯಿ ಮೌಲ್ಯದ ಈ ಭೂಮಿಯನ್ನು ಕಾರ್ಯಾಚರಣೆಯಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ಮಾಡಿದೆ. ನಗರದಲ್ಲಿನ ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದನ್ನು ಪತ್ತೆಹಚ್ಚಿ ತೆರವುಗಿಳಿಸಲು ಡಿಸಿ, ಎಡಿಸಿ, ಎಸಿ ಮೊದಲಾದವರನ್ನು ಒಳಗೊಂಡ ಸಮಿತಿ ಈ ಬಗ್ಗೆ ಪರಿಶೀಲನೆ ಮಾಡಿ ಈ ಪ್ರಕ್ರಿಯೆ ನಡೆಸಿದೆ.
ಇಂತಹ ಅನೇಕ ಪ್ರಕರಣಗಳಿದ್ದು ಇನ್ನು ಮುಂದೆ ಒತ್ತುವರಿ ತೆರವು ಕಾರ್ಯ ಮತ್ತೆ ಮುಂದುವರೆಯಲಿದೆಯಂತೆ.


