ದೇವಸ್ಥಾನವನ್ನು ತಡರಾತ್ರಿ ತೆರವು

Ravi Talawar
ದೇವಸ್ಥಾನವನ್ನು ತಡರಾತ್ರಿ ತೆರವು
WhatsApp Group Join Now
Telegram Group Join Now

ರಾಯಚೂರು: ರಾಯಚೂರು ಸಹಾಯಕ‌ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ಸಂತೋಷ ನಗರದಲ್ಲಿನ ಶಿವ ಹಾಗೂ ಗಣೇಶ ದೇವಸ್ಥಾನವನ್ನು ತಡರಾತ್ರಿ ತೆರವುಗೊಳಿಸಲಾಗಿದೆ.

ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಗ್ರಿಗಳನ್ನು ಇಡಲು ಶೆಡ್‌ ಕಟ್ಟಲಾಗಿತ್ತು. ಅದೇ ಶೆಡ್ ಅನ್ನು ದೇಗುಲ ಮಾಡಿಕೊಂಡು ಬಡಾವಣೆಯ ನಿವಾಸಿಗಳು ಪೂಜೆ ಮಾಡುತ್ತಿದ್ದರು. ಆದರೆ ಈ ಸಿ.ಎ. ಸೈಟ್ 2022ರ ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರಾಗಿತ್ತು. ಇದರ ಬೆನ್ನಲ್ಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಬಡಾವಣೆಯ ಜನರು ವಿರೋಧ ವ್ಯಕ್ತಪಡಿಸಿದ್ದರು.

ರಾಯಚೂರಿನ ಎಲ್.ಬಿ.ಎಸ್.ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರು ಮಾಡಲಾಗಿತ್ತು. ಜಾಗ ಮಂಜೂರಾದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ.

ಸ್ಥಳೀಯರ ವಿರೋಧದ ನಡುವೆಯೂ ‌ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯ ನಡೆದಿದೆ. ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಹೆಚ್ಚುವರಿ ಎಸ್​​ಪಿಗಳಾದ ಶಿವಕುಮಾರ್ ಮತ್ತು ಹರೀಶ್, ಮೂವರು ಡಿವೈಎಸ್​​ಪಿಗಳು, 10ಕ್ಕೂ ಹೆಚ್ಚು ಪಿಐ ಹಾಗೂ ನೂರಾರು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article