ಈಗ ಹನಿ ನೀರಿಗೆ ಒದ್ದಾಡುವಂತಾದ ಪೌರಕಾರ್ಮಿಕರು!

Ravi Talawar
ಈಗ ಹನಿ ನೀರಿಗೆ ಒದ್ದಾಡುವಂತಾದ ಪೌರಕಾರ್ಮಿಕರು!
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 22: ಬೆಂಗಳೂರು ನಗರವನ್ನು ನಿತ್ಯ ಸ್ವಚ್ಛಗೊಳಿಸಿ ಸುದಂರವಾಗಿ ಕಾಣುವಂತೆ ಮಾಡುವ ಪೌರಕಾರ್ಮಿಕರೇ ಈಗ ಹನಿ ನೀರಿಗೆ  ಒದ್ದಾಡುವಂತಾಗಿದೆ.

ಬೆಂಗಳೂರಿನ ಜಲದಾಹದ ಸಂಕಷ್ಟಕ್ಕೆ ನಲುಗಿದ್ದ ಅವರಿಗೆ ಇದೀಗ ಹನಿ ಹನಿ ನೀರಿಗೂ ಪರದಾಡವಂತಾಗಿದೆ. ಕೆಆರ್ ಪುರಂನ ಹೂಡಿಯಲ್ಲಿರೋ ಪೌರಕಾರ್ಮಿಕರ ಕುಟುಂಬಗಳು ನೀರಿಗಾಗಿ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬರುವ ಅಲ್ಪಸ್ವಲ್ಪ ಹಣವನ್ನು ನೀರಿಗೆ ಕೊಡುತ್ತಿರುವ ಕಾರ್ಮಿಕರು ಸಮಸ್ಯೆ ಬಗೆಹರಿಸದ ಜಲಮಂಡಳಿ, ಪಾಲಿಕೆಗೆ ನೀರು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

ರಸ್ತೆಬದಿ ಸಾಲು ಸಾಲು ಬಿಂದಿಗೆಗಳು, ದೊಡ್ಡ ದೊಡ್ಡ ಡ್ರಮ್​ಗಳನ್ನು ಹೆಗಲ ಮೇಲೆ ಹೊತ್ತು ನೀರು ತುಂಬಿಸಿಕೊಳ್ಳಲು ಬರುತ್ತಿರುವ ಪೌರಕಾರ್ಮಿಕರನ್ನು ಐಟಿಸಿಟಿ ಬೆಂಗಳೂರಿನ ಹೂಡಿಯಲ್ಲಿ ದಿನನಿತ್ಯ ಕಾಣಬಹುದು. ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವ ಈ ಜನ ರಿಗೆ, ಜಲದಾಹದ ಬಿಸಿ ತಟ್ಟಿದೆ. ನೀರಿಲ್ಲದೇ ಪರದಾಡುತ್ತಿರುವ ಇವರು ಬರುವ ಅಲ್ಪಸ್ವಲ್ಪ ಹಣದಲ್ಲೇ ದುಡ್ಡು ಹಾಕಿ ಟ್ಯಾಂಕರ್ ನೀರು ತರಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ಸರ್ಕಾರಿ ಶಾಲೆಯ ಬೋರ್ ವೆಲ್​​ನಿಂದ ನೀರು ಪಡೆಯುತ್ತಿದ್ದ ಇವರಿಗೆ, ಇದೀಗ ಶಾಲೆ ನೀರು ಕೂಡ ಸಿಗುತ್ತಿಲ್ಲ. ಅತ್ತ ಅಕ್ಕಪಕ್ಕದ ಪ್ರದೇಶದ ಜನರು ಕೂಡ ನೀರು ಕೊಡಲು ನಿರಾಕರಿಸುತ್ತಿರುವುದು ಕಾರ್ಮಿಕರನ್ನು ಮತ್ತಷ್ಟು ಕಂಗಾಲಾಗಿಸಿದೆ. ದುಡಿಯೋ ದುಡ್ಡೆಲ್ಲ ನೀರಿಗೆ ಕೊಟ್ಟರೆ ಬದುಕೋದು ಹೇಗೆ ಎಂದು ಇವರು ಅಳಲು ತೋಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now
Share This Article