ಸನ್ಮಾನ ಮಾಡಲಾಯಿತು ಎಂದರು.
ಊರಿನ ಆರೋಗ್ಯಕ್ಕಾಗಿ ತಮ್ಮ ಆರೋಗ್ಯ ಲೆಕ್ಕಿಸದೆ ದುಡಿಯುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಿದರೆ ಮಾನವೀಯತೆಗೆ ಅರ್ಥ ಬರಲಿದೆ. ಅರೋಗ್ಯಕರ ಸಮಾಜಕ್ಕೆ ಪೌರಕಾರ್ಮಿಕ ಶ್ರಮದಾನ ಮಹತ್ವವಾದದು, ನಾವು ನಮ್ಮ ಮನೆ ಸ್ವಚ್ಛತೆ ಮಾಡಿಕೊಳ್ಳಲು ಪರದಾಡುತ್ತೆವೆ. ಆದರೆ, ಪೌರ ಕಾರ್ಮಿಕರು ಇಡೀ ಊರಿನ ಸ್ವಚತೆಗೆ ಯಾವುದೆ ರೀತಿ ಮುಜಗರ ಪಡೆದೆ ತಮ್ಮ ಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಾರೆ ಅವರನ್ನು ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ಸಾರ್ವಜನಿಕರು ಕಸವನ್ನು ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡಬೇಕು. ಅವರಿಗೂ ಕೂಡ ನಮ್ಮಂತೆ ತಂದೆ ತಾಯಿ ಹಾಗೂ ಮಕ್ಕಳು ಇರುತ್ತಾರೆ. ಹಾಗಾಗಿ ನಾವು ಅವರನ್ನು ನಮ್ಮoತೆ ಮನುಷ್ಯ ರೆಂದು ತಿಳಿದು ಸಹಕರಿಸಬೇಕು.
ಅದಲ್ಲದೆ ಕಾರ್ಮಿಕರು ತಮ್ಮ ಆದಷ್ಟೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮಗೆ ಏನಾದರೂ ಸಮಸ್ಯೆಯಾದರೆ ನಮ್ಮ ಪೌಂಡೇಶನ್ ದಿಂದ ಸಹಾಯ- ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ರಾಮತೀರ್ಥ ನಗರ ಸೇವಕರಾದ ಹನುಮಂತ ಕೊಂಗಲಿ, ಹಾಗೂ ನಿರ್ವಾಣಿ , ಸುರೇಶ ಉರ್ಬಿನಟ್ಟಿ, ತೋರಗಲ, ಬಿಡನಾಳ, ಶಿವಾನಂದ ನಂದಗಾವಿ, ಖೋತ್, ವಿಲಾಸ ಕೆರೂರ, ತಾಹೀರ, ಅಪ್ಪಯ್ಯ ಕೋಲಕಾರ, ರಾಚಯ್ಯ ಮಠಪತಿ, ಚರಂತಿಮಠ, ಹಾಗೂ ಕುಮಟೆಕಾರ್, ಸಂತೋಷ್ ಮೆರೆಕಾರ್, ಕೆಂಪಣ್ಣ ಹಾಗೂ ಇತರರು ಇದ್ದರು .


