ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿ ನೇರ ವೇತನ ಪಾವತಿಸಬೇಕು: ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ

Ravi Talawar
ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿ ನೇರ ವೇತನ ಪಾವತಿಸಬೇಕು: ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ
WhatsApp Group Join Now
Telegram Group Join Now
ಧಾರವಾಡ: ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಪಾಲಿಕೆಯಿಂದ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ನೇರ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಮತ್ತು ನೌಕರರ ಸಂಘದ ಸದಸ್ಯರು  ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಕಚೇರಿ ಎದುರು ಸಮಾವೇಶಗೊಂಡು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 10 ಮಹಾನಗರ ಪಾಲಿಕೆಗಳು ಸ್ವಚ್ಛತ್ತಾ ಗುತ್ತಿಗೆ ರದ್ದುಪಡಿಸಿದೆ. ಆದರೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಸರ್ಕಾರದ ಆದೇಶವನ್ನು ದಿಕ್ಕರಿಸಿ ಕಾನೂನು ಬಾಹಿರವಾಗಿ ಗುತ್ತಿಗೆಯನ್ನು ಮುಂದುವರಿಸಿದ್ದು ಖಂಡನೀಯ ಕೂಡಲೇ ಅದನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಕ್ಟೋಬರ್ 10 2023 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ 799 ಹೊರಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸುವಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ರಾಜಕೀಯ ಒತ್ತಡಕ್ಕೆ ಮಣಿದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರು ಪ್ರಸ್ತಾವವನ್ನು ಕಾನೂನು ಬಾಹಿರವಾಗಿದೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅವರ ಕುಟುಂಬಗಳು ಬೀದಿ ಪಾಲಾಗುತ್ತದೆ. ಈ ಹಿನ್ನಲೆಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಬೇಕು. ಎಲ್ಲ ಕಾರ್ಮಿಕರನ್ನು ನೇರ ವೇತನ ಮತ್ತು ನೇಮಕಾತಿ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪೂರ, ಕನಕಪ್ಪ ಕೊಟಬಾಗಿ, ಗಾಳೇಪ್ಪ ದ್ವಾಸಲಕೇರಿ, ದತ್ತಪ್ಪ ಆಪೂಸಪೇಟ್, ನರಸಿಂಹ ಮಾದರ, ಅನಿತಾ ಈನಗೊಂಡ, ಬಾಬು ಸಗಬಾಲ, ಸುನೀಲ ದೊಡ್ಡಮನಿ, ಲಕ್ಷ್ಮೀ ಬೇತಾಪಲ್ಲಿ, ಪಾರವ್ವ ಹೊಸಮನಿ, ರೇಣುಕಾ ನಾಗರಾಳ, ಫಕ್ಕಿರವ್ವ ಕಡಕೋಳ, ಶರೀಫ ಮಸರಕಲ್ಲ, ಕಿರಣಕುಮಾರ ಸೋಮರೆಡ್ಡಿ, ನಾಗೇಶ ಚುರುಮರಿ, ಶಂಕರ ಶಿಕ್ಕಲಗಾರ, ಪ್ರಮೊದ ಮಾದರ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article