ಹುಬ್ಬಳ್ಳಿ27: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಆರೋಪಿ ಫಯಾಜ್ನನ್ನು ಸಿಐಡಿ ಅಧಿಕಾರಿಗಳು ಡಿಎನ್ಎ ಪರೀಕ್ಷೆ ಸಂಬಂಧ ಇಂದು ಇಲ್ಲಿನ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹ ಮಾಡಲಿದ್ದು, ನ್ಯಾಯಾಧೀಶರಾದ ನಾಗೇಶ ನಾಯಕ್ ಅವರ ಸಮ್ಮುಖದಲ್ಲಿ ಫಯಾಜ್ನ ಡಿಎನ್ಎ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಕಿಮ್ಸ್ ವೈದ್ಯರಿಂದ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ.