ಚೌಕಿದಾರ್  ಜಾಲಿ ಸಾಂಗ್ ರಿಲೀಸ್

Ravi Talawar
ಚೌಕಿದಾರ್  ಜಾಲಿ ಸಾಂಗ್ ರಿಲೀಸ್
WhatsApp Group Join Now
Telegram Group Join Now
      ರಥಾವರ ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ‘ಚೌಕಿದಾರ್’ ಚಿತ್ರದ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮತ್ತೊಂದು ಗೀತೆ ಬಿಡುಗಡೆಯಾಗಿದೆ.
     ‘ಚೌಕಿದಾರ್’ ಸಿನಿಮಾದ ಜಾಲಿ ಹಾಡು ರಿಲೀಸ್ ಆಗಿದೆ. ನಾಯಕ ಓ ಮೈ ಬ್ರೋ ಎಂದು ಕುಣಿಯುವ ಹಾಡು ಇದಾಗಿದೆ. ಇದೇ ಸಮಯದಲ್ಲಿ ಅವನಿಗೆ ಅವನ ತಂದೆ ಸಾಥ್‌ ಕೊಟ್ಟಿದ್ದಾರೆ. ತಂದೆ ಪಾತ್ರ ನಿರ್ವಹಿಸಿರುವ ಸಾಯಿ ಕುಮಾರ್ ಭರ್ಜರಿಯಾಗಿ ಹೆಜ್ಜೆ ಹಾಕಿರುವುದು ವಿಶೇಷ. ಮುರುಳಿ‌ ಮಾಸ್ಟರ್ ಹಾಡನ್ನು ಕೋರಿಯೋಗ್ರಫಿ ಮಾಡಿದ್ದಾರೆ.
     ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಚೌಕಿದಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಓ ಮೈ ಬ್ರೋ ಪ್ಯಾಥೋ ಗೀತೆಗೆ ಖ್ಯಾತ ಗಾಯಕ ಕೈಲಾಸ್ ಖೇರ್ ಹಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ.
     ಚಿತ್ರದಲ್ಲಿ ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ,
ಹೋಲಿಸ ಅಧಿಕಾರಿಯಾಗಿ ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
     ‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್‌ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಪೂರೈಸಿದ್ದಾರೆ. ‘ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ.
WhatsApp Group Join Now
Telegram Group Join Now
Share This Article