ಬೆಳಗಾವಿ – ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ ), ಬೆಳಗಾವಿ ಸಂಸ್ಥೆಯು ಕಳೆದ 26 ವರ್ಷಗಳಿಂದ ಪ್ರತಿ ವರ್ಷವು ಆಯ್ದ ಕೃತಿಗಳಿಗೆ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದೆ. ಅದರಂತೆ 2024 ರಲ್ಲಿ ಪ್ರಕಟವಾದ 42 ಕೃತಿಗಳಲ್ಲಿ 11 ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ವಿದ್ಯಾಧರ ಮುತಾಲಿಕ ದೇಸಾಯಿ, ಧಾರವಾಡ ಅವರ “ಮೇಲಕಾಡತಾವು ನೆನಪುಗಳು”, ಡಾ.ಲಕ್ಷ್ಮಣ ವ್ಹಿ. ಎ., ಬೆಂಗಳೂರು ಅವರ”ಜೀರಿ ಮಳೆ ಕಣ್ಣು “, ಮಲ್ಲಿಕಾರ್ಜುನ್ ಶೇಲ್ಲಿಕೇರಿ ಬಾಗಲಕೋಟ, ಅವರ”ಹವೇಲಿ ದೊರೆಸಾನಿ”, ಮಹಾದೇವ ಬಸರಕೋಡ, ಅಮೀನಗಡ ಅವರ “ಸುರಧೇನು”, ಡಾ ಶಶಿಕಲಾ ಕಾಮೋಜಿ, ಬೆಳಗಾವಿ ಅವರ “ಕರೋನಾ ಕವನಗಳು”, ಪ್ರೊ. ಸಿದ್ದು ಸಾವಳಸಂಗ, ವಿಜಯಪುರ ಅವರ “ಗೋಧೂಳಿ ಗoಧ”ಡಾ. ತಯಾಬಲಿ ಹೊಂಬಾಳ, ಗದಗ ಅವರ “ಬಾರೋ ಬಾರೋ ಚಂದ್ರಮಾ” ಸತೀಶ್ ಕೆ. ಎಸ್. ಚಿಕ್ಕಮಗಳೂರು ಅವರ “ಭೈರ” ಯಲ್ಲಪ್ಪ ಹರನಾಳಗಿ ಕೊಪ್ಪಳ ಅವರ “ಮಕ್ಕಳಿಗಾಗಿ ಮಹಾಭಾರತ” ಸುನಿತಾ ಪ್ರಕಾಶ್ ದಾವಣಗೆರೆ ಅವರ “ಪದ್ಧವ್ವನ ಕೌದಿ ಮತ್ತು ಇತರೆ ಕಥೆಗಳು” ಎನ್. ಗುಣಶೀಲ, ಬೆಂಗಳೂರು ಅವರ “ಕಪ್ಪು ಕಾಡಿನಲ್ಲೊಂದು ಬೆಳದಿಂಗಳು ಹಾಗು ಇತರೆ ಕಥೆಗಳು”, ಆಯ್ಕೆ ಆಗಿರುತ್ತವೆ.
ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ), ಬೆಳಗಾವಿ ಹಾಗು ಧಾರವಾಡದ “ಶ್ರೀ. ಚೆನ್ನಲೀಲಾ ಟ್ರಸ್ಟ್” ಧಾರವಾಡ ಇವರು ಸಂಯುಕ್ತವಾಗಿ ಕೊಡಮಾಡುವ 2024 ನೇ ಸಾಲಿನ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಜೀವಮಾನ ಸಾಧನೆಗಾಗಿ ಕೊಡುವ “ಚೆನ್ನಶ್ರೀ” ಪ್ರಶಸ್ತಿಗೆ ಧಾರವಾಡದ ಡಾ. ಉಜ್ವಲಾ ಹಿರೇಮಠ (85), ಬೆಳಗಾವಿಯ ಮಲ್ಲಪ್ಪ ಗೌಡಪ್ಪನವರ (90), ಹಾವೇರಿಯ ಸಿದ್ದಮತಿ ನೆಲವಗಿ(91), ಹಾಗು ಬೆಳಗಾವಿಯ ರಾವಸಾಹೇಬ ಸೌದತ್ತೆ (92)ಅವರು ಆಯ್ಕೆಯಾಗಿದ್ದಾರೆಂದು ತಿಳಿಸಲು ಸಂತೋಷವಾಗುತ್ತದೆ.
ಪ್ರಶಸ್ತಿಗೆ ಬಂದ ಕೃತಿಗಳ ಹಾಗು ಜೀವಮಾನ ಸಾಧನೆಯ ಹಿರಿಯ ನಾಗರಿಕರ ಆಯ್ಕೆ ಸಮಿತಿ ಸದಸ್ಯರಾದಸ. ರಾ. ಸುಳಕೂಡೆ, ಶಶಿಕಲಾ ಪಾವಸೆ, ಲೀಲಾ ಕಲಕೋಟಿ, ಡಾ. ಗೀತಾಂಜಲಿ ಕುರಡಗಿ, ಆರ್. ಬಿ. ಬನಶಂಕರಿ, ಎಚ್. ಎ. ಮಾವುತ, ಡಾ. ಜಗದೀಶ್ ಹಾರೋಗೊಪ್ಪ, ಮಮತಾ ಶಂಕರ ಹಾಗು ಸಂಘದ ಎಲ್ಲ ಪದಾಧಿಕಾರಿಗಳು ಪ್ರಶಸ್ತಿ ವಿಜೇತ ಸಾಹಿತಿಗಳನ್ನು ಹಾಗು ಜೀವಮಾನ ಸಾಧನೆಯ ಪ್ರಸ್ತಿಗೆ ಆಯ್ಕೆಯಾದ ಹಿರಿಯ ನಾಗರಿಕರನ್ನು ಅಭಿನಂದಿಸಿದ್ದಾರೆ.


