ರಾಜ್ಯದಲ್ಲಿಯೇ ಕಸಾಪಗೆ ಹೆಚ್ಚು ದತ್ತಿ ನಿಧಿಯ ಖ್ಯಾತಿ ಬಳ್ಳಾರಿ ಜಿಲ್ಲೆಯದು: ಚೋರನೂರು ಕೊಟ್ರಪ್ಪ

Sandeep Malannavar
ರಾಜ್ಯದಲ್ಲಿಯೇ ಕಸಾಪಗೆ ಹೆಚ್ಚು ದತ್ತಿ ನಿಧಿಯ ಖ್ಯಾತಿ ಬಳ್ಳಾರಿ ಜಿಲ್ಲೆಯದು: ಚೋರನೂರು ಕೊಟ್ರಪ್ಪ
WhatsApp Group Join Now
Telegram Group Join Now
ಬಳ್ಳಾರಿ, ಜ.30: ಕನ್ನಡ ಭಾಷೆಯ ಸಂರಕ್ಷಣೆ, ಅಭಿವೃದ್ಧಿ,  ಸಾಹಿತ್ಯ, ವಿಮರ್ಶೆ ಮೊದಲಾದ ಆಧ್ಯತೆಗಳೊಂದಿಗೆ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ ನಿಂದ ನಡೆಯುವ  ಉಪನ್ಯಾಸಗಳಿಗೆ ಅತಿಹೆಚ್ಚು ದತ್ತಿ ನೀಡಿರುವ ಕೊಡುಗೆ ಬಳ್ಳಾರಿಯದು ಎಂದು  ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ ಹೇಳಿದರು.
ನಗರದ ಹೀರದ ಸೂಗಮ್ಮ ಶಾಲೆಯಲ್ಲಿ ಇಂದು  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ  ಹಮ್ಮಿಕೊಂಡಿದ್ದ ಚೋರನೂರು ಡಾ.ಟಿ.ಕೆ.ಬಸವರಾಜಪ್ಪ, ಸಿರಿಗೇರಿ ಬಸವರಾಜ್, ಪಟೇಲ್ ಬಸವರಾಜ್, ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು.
ಬೇರೆ ಭಾಷೆ ಕಲಿಯುವ ಅಗತ್ಯತೆ ಇದೆ. ಜೊತೆಗೆ  ಕನ್ನಡದ ಬಗ್ಗೆ ಅಭಿಮಾನ ಇಟ್ಟು ಕೊಳ್ಳಬೇಕು.  ಎಂದಿಗೂ ಕನ್ನಡವನ್ನು ಮರೆಯಬಾರದು. ನಮ್ಮ ನೋವು ನಲಿವು, ಕನಸು ಸಹ ಕನ್ನಡಲ್ಲಿದ್ದಾಗ ಅದು ನಿತ್ಯವಾಗಿರುತ್ತದೆಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ  ಅಧ್ಯಕ್ಷ ಎನ್.ವೀರಭದ್ರಗೌಡ ಅವರು “ನಾನೊಬ್ಬ ನಿದ್ರೆ ಮಾಡಿದರೆ ಅದು ನನ್ನಬ್ಬೊನ ಹಿತಕ್ಕೆ. ನಾನೊಬ್ಬ ಎಚ್ಚೆತ್ತು ದುಡಿದರೆ ಅದು ದೇಶಕ್ಕೆ ಹಿತ” ಎಂಬ ಮಾತಿನಂತೆ   ಶಾಲಾ ಮಕ್ಕಳು  ತಮ್ಮಜೀವನ ರೂಪಿಸಿಕೊಳ್ಳಬೇಕು.
ಅದಕ್ಕೆ ಮಕ್ಕಳು ರೀಲ್ಸ್ ನೋಡುವುದನ್ನು ಬಿಟ್ಟು, ನ್ಯೂಸ್ ನೋಡಿ. ಅದರಲ್ಲಿನ ಪ್ರಮುಖ ಘಟನಾವಳಿಗಳನ್ನು ನೋಟ್ ಮಾಡಿ ಮನನ ಮಾಡುತ್ತಿದ್ದರೆ ಅದು ಸ್ಪರ್ಧಾ ಪರೀಕ್ಷೆಗಳಿಗೆ ಸಹಕಾರಿಯಾಗುತ್ತೆ ಎಂದರು.
ನೈತಿಕ ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವ ಕುರಿತು ಉಪನ್ಯಾಸ ನೀಡಿದ. ನಿವೃತ್ತ ಮುಖ್ಯೋಪಾಧ್ಯಾಯ ಮೆಹತಾಬ್ ಅವರು, ನಮ್ಮದು ತ್ರಿಭಾಷಾ ಸೂತ್ರದ ದೇಶವಾದರೂ, ಆಂಗ್ಲ ಭಾಷೆಯಲ್ಲಿ ಭಾವನಗೆ ಹೆಚ್ವು ಅವಕಾಶ ಇಲ್ಲ. ಆದರೆ ಮಾತೃಭಾಷೆ ಕನ್ನಡದಲ್ಲಿ ಭಾವನೆಗಳಿ ಶಬ್ದಗಳ ಬಂಡಾರವೇ ಇದೆ. ಮಾತೃಭಾಷೆ ಮನಕ್ಕೆ ಹತ್ತಿರವಾಗಿ ಗ್ರಹಿಕೆಗೆ ಸಹಕಾರಿಯಾಗಲಿದೆ. ಹಾಗಾಗಿ ನೈತಿಕತೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ನಮ್ಮ ಭಾಷೆಯಲ್ಲಿ ಹೇಳಿದರೆ ಅದು ನಮಗೆ ಹೆಚ್ಚು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ.  ಮುಖ್ಯವಾಗಿ ನೈತಿಕ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
ಕಸಾಪದ ಜಿಲ್ಲಾ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದತ್ತಿ ಉಪನ್ಯಾಸದ ಕುರಿತು ವಿವರಿಸಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ  ಯಾಳ್ಪಿ ಮೇಟಿ ಪಂಪನಗೌಡ ಅಧ್ಯಕ್ಷತೆವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಟೆಂಗಿನಕಾಯಿ ಮಂಜುನಾಥ. ಡಾ.ಬಸವರಾಜ್ ಗದಗಿನ, ಕಣೇಕಲ್ ಎರ್ರಿಸ್ವಾಮಿ, ಕಾಶಿನಾಥ, ಕಸಾಪ ನಗರ ಅಧ್ಯಕ್ಷ ಎರ್ರಿಸ್ವಾಮಿ, ಶಾಲೆಯ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ಮುಖ್ಯ ಗುರು ಎಸ್.ಎಂ.ಶಿವಶರಣಯ್ಯ, ಶರಣ ಸಕ್ಕರೆ ಕರಡೀಶ ಶಾಲೆಯ ಮುಖ್ಯ ಗುರು ಖಾದರ್ ಬೀ ಶಾಲೆಯ ಮುಖ್ಯೋಪಾದ್ಯಾಯ ಅಕ್ಕಿ ಮರಿಸ್ವಾಮಿ ಸ್ವಾಗತ,   ಶಿಕ್ಷಕಿ ಎಲ್.ಜಯಂತಿ ಕಾರ್ಯಕ್ರಮ ನಿರೂಪಿಸಿದರು.
WhatsApp Group Join Now
Telegram Group Join Now
Share This Article