ನಿಮ್ಮ ಸೇವೆಗೆ ನನ್ನನ್ನು ಆಯ್ಕೆ ಮಾಡಿ: ಪ್ರಿಯಾಂಕಾ ಜಾರಕಿಹೊಳಿ

Ravi Talawar
ನಿಮ್ಮ ಸೇವೆಗೆ ನನ್ನನ್ನು ಆಯ್ಕೆ ಮಾಡಿ: ಪ್ರಿಯಾಂಕಾ ಜಾರಕಿಹೊಳಿ
WhatsApp Group Join Now
Telegram Group Join Now
.
ಮುಗಳಖೋಡ,03: ದೇಶವೇ ಹೆಮ್ಮೆ ಪಡುವ ಸರ್ಕಾರ ನಿಮ್ಮ ಸಹಕಾರದ ಸರ್ಕಾರ ಕರ್ನಾಟಕಕ್ಕೆ ಪಂಚ ಗ್ಯಾರಂಟಿ  ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ನಿಮ್ಮ ಧ್ವನಿಯಾಗಿ ಸೇವೆ ಮಾಡುವ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ಮುಗಳಖೋಡ ಪಟ್ಟಣದಲ್ಲಿ ಬಹಿರಂಗ ಪ್ರಚಾರದ ವೇದಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಂದ ಯಶಸ್ವಿಯಾಗಿದಿಯೋ ಹಾಗೆ ರಾಷ್ಟ್ರದಲ್ಲಿಯು ಯಶಸ್ವಿಯೋಜನೆ ಬರಬೇಕಾದರೆ ನಿಮ್ಮ ಸರ್ಕಾರ ಬರಬೇಕು ಮತದಾರ ದೇವರುಗಳಾದ ನೀವು ತಪ್ಪದೇ ನಿಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ನಿಮ್ಮ ಅಮೂಲ್ಯ ಮತ ನೀಡಿ ಆಯ್ಕೆ ಮಾಡಿ, ನಮ್ಮ ತಂದೆ ಸತೀಶ ಜಾರಕಿಹೊಳಿ ಹಾಗೂ ನೆಚ್ಚಿನ ಶಾಸಕ ಮಹೇಂದ್ರ ತಮ್ಮಣ್ಣವರ ಸಂಪೂರ್ಣ ಸಹಕಾರದಿಂದ ನಾನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ಹೇಳಿದರು.
  ಬಿಜೆಪಿ ಪ್ರಧಾನಿ ಮೋದಿಯವರಂತೆ ಸುಳ್ಳು ಹೇಳಿ ದೇಶದ ಜನತೆಗೆ ಮೋಸ ಮಾಡಿದಂತೆ ಸುಳ್ಳಿನ ಪಕ್ಷ ನಮ್ಮದಲ್ಲ ನಿಮ್ಮೆಲ್ಲರಿಗೂ ಸುಖ ಸಂತೋಷ ಸಮೃದ್ಧಿ ನಿರಂತರ ನೀಡಿದ ಪಕ್ಷ ಕಾಂಗ್ರೆಸ್ ಎಂದು ಮಾತನಾಡುತ್ತಾ .ರೈತರಿಗೆ ಅವಶ್ಯ ಬೇಕಾದ ಕಾಲುವೆ ನೀರು , ನಿರಂತರ ವಿದ್ಯುತ್, ಕಡುಬಡವರಿಗೆ ಅನ್ನ, ನೀರು, ಬೆಳಕು, ಆರೋಗ್ಯ ಪೂರ್ಣ ಜೀವನಕ್ಕೆ ಆಸರೆಯಾಗಿ ಪಂಚ ಯೋಜನೆಗಳು ಕಾರ್ಯಗತಗೊಂಡಿದ್ದು  ರಾಷ್ಟ್ರದ ಅಭಿವೃದ್ಧಿಗೆ ನಿಮ್ಮ ಸೇವೆಗೆ ನಿಮ್ಮ ಸರ್ಕಾರ ಬರಬೇಕಾದರೆ  ಪ್ರಿಯಾಂಕಾ ಜಾರಕಿಹೊಳಿ ಯವರನ್ನು  ಹಚ್ಚಿನ ಅಂತರದ ಮತಗಳಿಂದ ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ  ಪ್ರತಿಯೊಂದು ಅವಶ್ಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ ನಾವಿದ್ದೇವೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿ ಆಯ್ಕೆ ನಿಮ್ಮದು, ಸೇವೆ ನಮ್ಮದು, ಎಂದು ಹೇಳಿದರು.
ಈದೆ ಸಂದರ್ಭದಲ್ಲಿ ಮಾದರ ಸಮಾಜದ  ಶ್ರೀಶೈಲ ಕಡಕೋಳ, ರಾಣಪ್ಪ ಯಮನಪ್ಪ ಹಾದಿಮನಿ, ಶಿವಪ್ಪ ಮಹಾದೇವ ಸಂದ್ರಿಮನಿ, ಲಕ್ಷ್ಮಣ ಕೆಳಗಡೆ, ವಸಂತ ಯಮನಪ್ಪ ಬಾವಿಮನಿ, ಕುಮಾರ ಶ್ರೀಮಂತ ಚೌಡಕಿ, ವಸಂತ ಶಿಡ್ಲಪ್ಪ ಚೌಡಕಿ, ಭೀಮಪ್ಪ ಸಂತರಾಮ ಪೂಜಾರಿ, ದೀಪಕ ಸುಮಿತ್ರಾ ಪೂಜಾರಿ, ಚಿದಾನಂದ ಬಾವಿಮನಿ, ಕುಮಾರ ಶ್ರೀಮಂತ ಚೌಡಕಿ, ಸಂಜು ಸಂದ್ರಿಮನಿ, ಮಾಲಗಾರ ಸಮಾಜದ ಹಣಮಂತ ಕುಲಿಗೋಡ, ಸದಾಶಿವ ಗೋಕಾಕ, ವಿಠ್ಠಲ ಯಡವಣ್ಣವರ, ಶ್ರೀಶೈಲ ಗೋಕಾಕ, ಮಲ್ಲಪ್ಪ ಯಡವಣ್ಣವರ, ಯಲ್ಲಪ್ಪ ಗೋಕಾಕ, ಅಶೋಕ ಮೆಣಸಿನಕಾಯಿ, ರಾಮಪ್ಪ ಕುಲಿಗೋಡ, ಶಂಕರ ಗೋಕಾಕ, ಲಿಂಗಾಯತ ಸಮುದಾಯದ ರೇವಪ್ಪ ಶೇಗುಣಸಿ,ಬಗೆಪ್ಪ ಚಿಮ್ಮುಡ, ರಮೇಶ ಶೇಗುಣಸಿ, ಸಿದ್ದಪ್ಪ ಶೇಗುಣಸಿ, ಶಿವಪ್ಪ ಶೇಗುಣಸಿ, ಈರಪ್ಪ ದರೂರ ಗಿರಮಲ್ಲ ಶೇಗುಣಸಿ, ಕುಮಾರ ಚಿಮ್ಮುಡ, ಹಲವಾರು ಸಮಾಜದ ಮಹಾಂತೇಶ ಕಡಪಟ್ಟಿ, ಪ್ರಮೋದ ಮಾನೆ, ಶಿವಾನಂದ ಪನದಿ, ಯಲ್ಲಪ್ಪ ಮೆಟಿ, ಲಕ್ಷ್ಮಣ ಪನದಿ, ಸದಾಶಿವ ಪನದಿ, ಮಹಾದೇವ ಪನದಿ,ಹಲವಾರು ಮುಖಂಡರನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು .
ಮುಖಂಡರಾದ  ಅಶೋಕ ಕೊಪ್ಪದ, ಚನ್ನಪ್ಪ ಯಡವಣ್ಣವರ, ಪುರಸಭೆ ಸದಸ್ಯರಾದ ಪರಗೌಡ ಖೆತಗೌಡರ,ರಮೇಶ ಯಡವಣ್ಣವರ,ರಾವಸಾಹೇಬ ಗೌಲೆತ್ತನವರ, ಗೋಪಾಲ ಯಡವಣ್ಣವರ, ಗಂಗಪ್ಪಾ ಗೋಕಾಕ,ಬನಪ್ಪ ಹುಲ್ಲೋಳ್ಳಿ, ಹಣಮಾಸಾಹೇಬ ನಾಯಿಕ,, ಕರೆಪ್ಪ ಮಂಟೂರ,ವೈ ಚಂದ್ರು ಕುಲಿಗೋಡ, ಸಿದ್ದಣ್ಣ  ಹೊಸಪೇಟಿ, ಮಹಾಂತೇಶ ಕುರಾಡೆ,, ಜಿಲ್ಲಾ ಮಹಿಳಾ ಅಧ್ಯಕ್ಷೆ  ನಿರ್ಮಲಾ ಪಾಟೀಲ, ಜಾಸ್ಮಿನ್ ಅಲಾಸೆ, ಪ್ರದೀಪ ಹಾಲಗುಣಿ,ಭೀಮು ಬದ್ನಿಕಾಯಿ, ಬಸವರಾಜ ಮುಗಳಿಹಾಳ,ಅರ್ಜುನ್ ನಾಯಕವಾಡಿ, ಧಶಗೀರ ಕಾಗವಾಡೆ , ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀಶೈಲ ಅಂಗಡಿ, ಸ್ವಾಗತಿಸಿ ನಿರೂಪಿಸಿದರು.
WhatsApp Group Join Now
Telegram Group Join Now
Share This Article