ಗುರ್ಲಾಪುರ. ಡಿ. 2. ರೈತರ ಸಂಪೂರ್ಣ ಸಾಲ ಮನ್ನಾ, ಡಾ. ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಅಗ್ರಹಿಸಿ, ಡಿ.16 ರಂದು ಸುವರ್ಣಸೌಧ ಎದುರುಗಡೆ ಒಂದು ಲಕ್ಷ ಅಧಿಕ ರೈತರೊಂದಿಗೆ ರಾಜ್ಯ ರೈತ ಸಂಘ ಏಕೀಕರಣದಿಂದ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಗುರ್ಲಾಪೂರ ಪ್ರವಾಸ ಮಂದಿರದಲ್ಲಿ ಜರುಗಿದ, ರೈತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಕ್ಕರೆ ಕಾರ್ಖಾನೆಗಳಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪ್ರತಿ ಟನಿಗೆ ಇತನಾಲ್ ಹಾಗೂ ಅಬಕಾರಿ ಇಲಾಖೆ 6 ಸಾವಿರ ಸಂದಾಯವಾಗುತ್ತಿದ್ದು, ಆ ತೆರಿಗೆ ಹಣದಲ್ಲಿ ರೈತರಿಗೆ ಒಂದು ಟನಿಗೆ ಸರ್ಕಾರದಿಂದ 2 ಸಾವಿರ ಹಾಗೂ ಕಾರ್ಖಾನೆಗಳಿಂದ 4 ಸಾವಿರ ರೂ, ನೀಡಬೇಕೆಂದು ಬೇಡಿಕೆ ಇದೆ. ಹಾಗಾಗಿ ಸರ್ಕಾರ ಕಬ್ಬು ಬೆಳೆಗಾರರಿಗೆ ಸ್ಪಂದಿಸಿ ಕೂಡಲೇ ಈ ಎರಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರ ಸೌಲಭ್ಯಗಳನ್ನು ನೀಡುವಂತಾಗಬೇಕು. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಸದನದಲ್ಲಿ ಎಲ್ಲ ಶಾಸಕರು ಪ್ರಶ್ನಿಸಬೇಕೆಂದರು.
ರೈತ ಸಂಘ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಗಡಿ ಮಾತನಾಡಿ, ಎ.ಪಿ.ಎಮ್.ಸಿ 87ಬಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆದುಕೊಳ್ಳಬೇಕು. ಶುರ್ಗ್ ಕಮಿಷನರ ಇಲಾಖೆಯಲ್ಲಿ ಬರಿ 5 ಜನ ಅಧಿಕಾರಿಗಳಿಂದು, 100ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನೇಮಿಸಬೇಕು. ರಾಜ್ಯದ ಪ್ರತಿಯೊಂದು ಹಳ್ಳಿಗಳ್ಳಿ ಗ್ರಾಮ ಸೇವಕರನ್ನು ನೇಮಿಸಬೇಕು, ರಾಜ್ಯದ ಎ.ಪಿ.ಎಮ್.ಸಿ ಇಲಾಖೆಯಲ್ಲಿ ಈಗಾಗಲೇ 90ಕೋಟಿ ರೂ, ಇರಿಸಲಾಗಿದೆ. ಆದರೇ ಆ ಹಣದಿಂದ ಯಾವುದೇ ಎ.ಪಿ.ಎಮ್.ಸಿಗಳ ಅಭಿವೃದ್ಧಿಗೆ ಬಳಸಿಕೊಂಡಿಲ್ಲ. ಆ ಹಣದಲ್ಲಿ ಪ್ರತಿಯೊಂದು ಕಾರ್ಖಾನೆಗಳ ಮುಂದೆ ಸರ್ಕಾರ ತೂಕದ ಸೇತುವೆಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ರಾಜು ಪವರ್, ತಾಲೂಕಾಧ್ಯಕ್ಷ ಈರಣ್ಣ ಸಸಾಲಟ್ಟಿ,ಮುಖಂಡರಾದ ಪ್ರಭು ತೇರದಾಳ, ವಾಸು ಪಂಡ್ರೋಳಿ, ಪದ್ಮನ್ನ ಉಂದ್ರಿ, ರವೀಂದ್ರ ನುಚ್ಚುಂಡಿ, ಅಪ್ಪಯ್ಯ ಕಿಲಾರಿ, ನಂದೇಪ್ಪ ನೇಸೂರ, ಶಿವಲಿಂಗ ಮುಲಿಮನಿ, ಈರಣ್ಣ ಪಾಟೀಲ, ಲಕ್ಕಪ್ಪ ಖಣದಾಳಿ ಇದ್ದರು.
ಫೋಟೋ ಕ್ಯಾಪ್ಸನ್> ಗುರ್ಲಾಪೂರ ಪ್ರವಾಸ ಮಂದಿರದಲ್ಲಿ ಜರುಗಿದ, ರೈತರ ಸಭೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿದರು.