ನವದೆಹಲಿ, ಆಗಸ್ಟ್ 19: ಅಮೆರಿಕದ ಟ್ಯಾರಿಫ್ ಆರ್ಭಟದ ಮಧ್ಯೆ ಭಾರತ ಮತ್ತು ಚೀನಾ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದ್ದಿಲ್ಲದೆ ಹತ್ತಿರ ಬರುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿ ಫಲಪ್ರದವಾದಂತಿದೆ. ಭಾರತಕ್ಕೆ ಬಹಳ ಅವಶ್ಯಕವಾಗಿರುವ ಕೆಲ ಸರಕುಗಳನ್ನು ಕೊಡಲು ಚೀನಾಒಪ್ಪಿದೆ. ರಸಗೊಬ್ಬರ ವಿರಳ ಭೂ ಖನಿಜ, ಟನಲ್ ಬೋರಿಂಗ್ ಮೆಷಿನ್ಗಳನ್ನು ಭಾರತಕ್ಕೆ ಸರಬರಾಜು ಮಾಡಲು ಚೀನಾ ಒಪ್ಪಿದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಕೃಷಿ ಸರಕುಗಳನ್ನುಕೊಡಲು ಒಪ್ಪಿದ ಚೀನಾ

ಚೀನಾಗೆ ಹೋಗಿದ್ದ ವೇಳೆ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾರತಕ್ಕೆ ಬಹಳ ಅಗತ್ಯವಾಗಿರುವ ರಸಗೊಬ್ಬರಗಳು, ರೇರ್ ಅರ್ಥ್ ಮಿನರಲ್ಗಳು, ಟನಲ್ ಬೋರಿಂಗ್ ಮೆಷೀನ್ಗಳನ್ನು ಸರಬರಾಜು ಮಾಡುವ ಕುರಿತು ಮಾತನಾಡಿದ್ದರೆನ್ನಲಾಗಿದೆ. ಇದಕ್ಕೆ ಚೀನಾದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಲಾಗುತ್ತಿದೆ.