ಮಕ್ಕಳ ಮನಸ್ಸು ಮೃದು, ಅವರ ಮುಂದೆ ಧನಾತ್ಮಕ ಚಿಂತನೆಗಳನ್ನು ಪ್ರಸ್ತಾಪಿಸಿ – ಅರಳಿಕಟ್ಟಿ

Hasiru Kranti
ಮಕ್ಕಳ ಮನಸ್ಸು ಮೃದು, ಅವರ ಮುಂದೆ ಧನಾತ್ಮಕ ಚಿಂತನೆಗಳನ್ನು ಪ್ರಸ್ತಾಪಿಸಿ – ಅರಳಿಕಟ್ಟಿ
WhatsApp Group Join Now
Telegram Group Join Now

ಮಹಾಲಿಂಗಪುರ:ಮಕ್ಕಳ ಮನಸ್ಸು ಮೃದುವಾದದ್ದು, ಪಾಲಕರು ಅವರ ಮುಂದೆ ಋಣಾತ್ಮಕ ಅಂಶಗಳನ್ನು ಮಾತನಾಡದೆ, ಧನಾತ್ಮಕ ಚಿಂತನೆಯುಳ್ಳ ವಿ?ಯಗಳನ್ನು ಮಾತ್ರ ಪ್ರಸ್ತಾಪಿಸಬೇಕು. ಈ ರೀತಿ ಮಾಡಿದಲ್ಲಿ ಆ ಮಕ್ಕಳು ಭವಿ?ದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳುತ್ತಾರೆ ಎಂದು ಟಿ.ವಿ.ಅರಳಿಕಟ್ಟಿ ಫೌಂಡೇಶನ್…. ಹೇಳಿದರು.
ಸಮೀಪದ ಸೈದಾಪುರ- ಸಮೀರ್ವಾಡಿ ಸಕ್ಕರೆ ಕಾರ್ಖಾನೆಯ ಕೆ. ಜೆ.ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ೨೨ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭೌಧ್ಧಿಕ ಮಟ್ಟ ಹೆಚ್ಚಳಕ್ಕೆ ಟಿವಿ ಮತ್ತು ಮೊಬೈಲುಗಳಿಂದ ಅವರನ್ನು ದೂರವಿಟ್ಟು, ಉತ್ತಮ ನಡವಳಿಕೆ ಬೆಳೆಸಬಲ್ಲ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು, ಮುಂದೆ ಇವರೇ ಸಮಾಜಮುಖಿ ಕೆಲಸ ಮಾಡುವವರಾಗುತ್ತಾರೆ ಎಂದು ಪಾಲಕರಿಗೆ ತಿಳಿಸಿದರು.
ಶಿಕ್ಷಣ ಸಂಸ್ಥೆಗಳು ಕೇವಲ ಹಣ ಸಂಪಾದಿಸುವುದರಲ್ಲಿಯೇ ಕಾಲ ಕಳೆಯದೆ, ಬಡವರ್ಗಗಳ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಅವರ ಮಕ್ಕಳಿಗೆ ಶಿಕ್ಷಣ ನೀಡುವತ್ತ ಗಮನಹರಿಸಬೇಕು, ಹೀಗೆ ಮಾಡಿದಲ್ಲಿ ಇದೇ ಮಕ್ಕಳು ಭವಿ?ದಲ್ಲಿ ಉತ್ತಮ ಹೆಸರು ಮಾಡುವುದಲ್ಲದೆ ಸಂಸ್ಥೆಯ ಹೆಸರನ್ನು ಕೂಡ ಬೆಳಗುತ್ತಾರೆ ಎಂದು ಬಡ ಮಕ್ಕಳ ಶಿಕ್ಷಣ ಬಗ್ಗೆ ಕಾಳಜಿ ವಹಿಸಲು ತಿಳಿಸಿದರು.
ಕಾರ್ಖಾನೆಯ ಮುಖ್ಯ ನಿರ್ದೇಶಕರಾದ ಬಿ.ಆರ್.ಭಕ್ಷಿ ಮಾತನಾಡಿ, ದೂರದ ಬೇರೆ ಬೇರೆ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಖರ್ಚು ವೆಚ್ಚ ನೋಡಿದರೆ ನಮ್ಮ ಕೆ.ಜೆ.ಸೋಮಯ್ಯ ಸಂಸ್ಥೆಯ ಖರ್ಚು ವೆಚ್ಚ ಬಹಳ? ಕಡಿಮೆ. ಈ ಸಂಸ್ಥೆಯ ಯಶಸ್ಸು ಮತ್ತು ಸಾಧನೆಗೆ ಈ ಭಾಗದ ಎಲ್ಲ ರೈತರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಕಬ್ಬು ವ್ಯವಸ್ಥಾಪಕರಾದ ಹಣ್ಮಂತ ಕಣಬೂರ ಮಾತನಾಡಿ, ಹೆಚ್ಚಿನ ಹಣ ವಹಿಸಿ ದೂರದ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಓದಿಸಿ ಯಶಸ್ವಿಗಾಗಿ ಹುಡುಕಾಟ ನಡೆಸುತ್ತವೆ, ಆದರೆ ನಮ್ಮ ಬಳಿಯೇ ಇರುವ ಕೆ.ಜೆ. ಸೋಮಯ್ಯ ಶಾಲೆಯ ಮಕ್ಕಳು ಕಡಿಮೆ ಖರ್ಚಿನಲ್ಲಿ ಕಲಿತು ಸಿಇಟಿ ಯಲ್ಲಿ ಸ್ಥಾನ ಪಡೆಯುತ್ತಾರೆ ಎಂದರೆ ಇದಕ್ಕಿಂತ ಹೆಚ್ಚಿನ ಯಶಸ್ಸು ಬೇರೆ ಇಲ್ಲ ಎಂದು ಶಾಲೆಯ ಹೆಗ್ಗಳಿಕೆಯನ್ನು ಕೊಂಡಾಡಿದರು.
ಅಚ್ಚುಕಟ್ಟಾದ ವೇದಿಕೆ, ಕಂಗೋಳಿಸುವ ವಿದ್ಯುತ್ ದೀಪಗಳು ತಂಡ ರಾತ್ರಿ ವರೆಗೆ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರೆ,ಪಾಲಕ, ಪೋ?ಕರು ತಮ್ಮ ಮಕ್ಕಳೇ ಪ್ರದರ್ಶನ ನೀಡಿದ ಆ ಕ್ಷಣವನ್ನು ಬೆರಗುಗಣ್ಣಿನಿಂದ ವೀಕ್ಷಿಸಿ ಆನಂದ ಪಟ್ಟರು.
ವೇದಿಕೆ ಮೇಲಿನ ವಿಶೇ? ಆಹ್ವಾನಿತರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಿನ್ಸಿಪಾಲರಾದ ಸಿ. ಅನೀಲಕುಮಾರ ಅವರು ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು.ಸಂಚಾಲಕಿ ಅಶ್ವಿನಿ ಅವರು ಅತಿಥಿ ಮಹೋದಯರನ್ನು ಸಂಸ್ಥೆಯ ಪರವಾಗಿ ಸ್ವಾಗತ ನೀಡಿದರು.
೧೨ mಟಠಿ ೦೧ ಠಿhoಣo

 

WhatsApp Group Join Now
Telegram Group Join Now
Share This Article