ಬಳ್ಳಾರಿ : 17..ದೇಶ ಸೇವೆಗಾಗಿ ನೀವು ಸದಾ ಸಿದ್ದರಿರಬೇಕು ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು ಹೆತ್ತ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಿ ಗುರುಗಳಿಗೆ ತಕ್ಕ ಶಿಷ್ಯನಾಗಿ ಹಾಗೂ ಒಳ್ಳೆಯ ವಿದ್ಯಾರ್ಥಿಯಾಗಿರಬೆಕು ಎಂದು ಕಲ್ಯಾಣ ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಿ ಎನ್ ಪ್ರಹ್ಲಾದ ರೆಡ್ಡಿ ಮಕ್ಕಳಿಗೆ ತಿಳಿಸಿದರು.
ಅವರು ಬಳ್ಳಾರಿ ಜಿಲ್ಲೆಯ ಇನ್ನರ್ ವೀಲ್ ಸಂಸ್ಥೆಯ ಸಯೋಗದಿಂದ ಎಂಜಿಎಂ ಶಾಲಾ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ವತಿಯಿಂದ,, ರಾಷ್ಟ್ರ ರಕ್ಷಣೆಯಲ್ಲಿ ಅರೆ ಸೇನೆ ಪಡೆಗಳ ಪಾತ್ರ,, ಎಂಬುವ ವಿಷಯವ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ದೇಶದಲ್ಲಿ ಎಷ್ಟು ರಾಜ್ಯಗಳಿವೆ ಆ ರಾಜ್ಯಗಳು ಯಾವ ರಾಷ್ಟ್ರಗಳ ಗಡಿ ಭಾಗಗಳನ್ನು ಹೊಂದಿವೆ, ಆ ಗಡಿಭಾಗಗಳ ವಿಸ್ತೀರ್ಣ ಎಷ್ಟು? ಯಾವ ಯಾವ ಸೈನಿಕರು ಯಾವ ಗಡಿ ಭಾಗದಲ್ಲಿ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ನಕ್ಸಲ್ ಎಂದರೇನು ಉಗ್ರವಾದಿಗಳೆಂದರೇನು, ಅವರ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡುತ್ತೇವೆ ಮತ್ತು ಎಲ್ ಎ ಸಿ ಮತ್ತು ಎಲ್ ಓ ಸಿ ಎಂದರೇನು 28 ರಾಜ್ಯಗಳು 8 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರುವ ಈ ನಮ್ಮ ಭವ್ಯ ಭಾರತವನ್ನು ಸೈನಿಕರು 24*7 ಮಳೆಗಾಳಿ ಎನ್ನದೆ ದಟ್ಟವಾದ ಹಿಮ ಪರ್ವತಗಳಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಒಂಬತ್ತು ತಿಂಗಳು ಒಂದು ತಾಯಿಯು ತನ್ನ ಗರ್ಭದಲ್ಲಿ ಮಗುವನ್ನು ಯಾವ ರೀತಿ ಲಾಲನೆ ಪಾಲನೆ ಮಾಡುತ್ತಾಳೆಯೆ ಅದೇ ತರಹ ನಮ್ಮ ಭಾರತಾಂಬೆಯನ್ನು ಸೈನಿಕನು ಹಗಲಿರುಳು ಕಾಯುತ್ತಿರುತ್ತಾರೆ ಅದಕ್ಕಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಅಂದು ನುಡಿದಿದ್ದರೂ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಇನ್ನರ್ ವೀಲ್ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು ಮತ್ತು ಮಾಜಿ ಸೈನಿಕರು ಹಾಗೂ ಬಳ್ಳಾರಿ ಜಿಲ್ಲೆಯ ಗೃಹ ರಕ್ಷಕ ದಳದ ಕಮಾಂಡೆಂಟ್ ಆದ ಶೇಕ್ ಸಾಬ್ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಉಪಾಧ್ಯಕ್ಷ ಈಶ್ವರ ರೆಡ್ಡಿ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಎಂ ಆರ್ ರೆಡ್ಡಿ ಉಪಸ್ಥಿತರಿದ್ದರು.