ಇಂಡಿ: ಪಟ್ಟಣದ ಪ್ರಮುಖ ರಸ್ತೆಗಳಾದ ಸಿಂದಗಿ ರಸ್ತೆ, ವಿಜಯಪುರ ರಸ್ತೆ, ಅಗರಖೇಡ ರಸ್ತೆ, ಚಡಚಣ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಓಡಾಡಿಕೊಂಡಿವೆ. ಅಲ್ಲದೆ ಬಸವೇಶ್ವರ ವೃತ್ತ, ಗಾಂಧಿ ವೃತ್ತಗಳು ಸೇರಿದಂತೆ ವಿವಿಧ ವಾರ್ಡಗಲ್ಲಿ ಕೂಡಾ ದನಗಳ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದರಿಂದ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತಿವೃ ತೊಂದರೆಯಾಗುತಿದೆ.
ಆದ್ದರಿಂದ ಈ ಕೂಡಲೆ ಸಂಬAದ ಪಟ್ಟ ಮಾಲ್ಕಿಯವರಿಗೆ ಸೇರಿದ ತಮ್ಮ ದನಗಳನ್ನು ಹಾಗೂ ಹಂದಿಗಳನ್ನು ರಸ್ತೆಗಳ ಮೇಲೆ ಬಿಡದೆ ಮುಜಂಜಾಗೃತ ಕ್ರಮಕೈಗೊಳ್ಳಬೇಕು ಇಲ್ಲಾ ೭ ದಿನಗಳಲ್ಲಿ ಬೇರೆಡೆ ಸಾಗಿಸಬೇಕು. ಒಂದು ವೇಳೆ ಈ ಅವದಿಯಲ್ಲಿ ಸಾಗಿಸದೆ ಇದ್ದಲ್ಲಿ ದನಗಳನ್ನು ಗೋಶಾಲೆಗೆ ಇನ್ನೂ ಹಂದಿಗಳನ್ನು ಬೇರೆಡೆ ಸಾಗಿಸಲಾಗುವುದು. ಇವುಗಳನ್ನು ಯಾವುದೆ ಕಾರಣಕ್ಕೂ ಮರಳಿ ಕೊಡುವುದಿಲ್ಲ ಎಂದು ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.