ಚನ್ನಮ್ಮನ ಕಿತ್ತೂರು, ಅಕ್ಟೋಬರ್ 08 : ರಾಜ್ಯ, ರಾಷ್ಟ್ರ ನಾಯಕರ ಒಮ್ಮತ, ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರೇ ಮುಖ್ಯಂತ್ರಿಯಾಗಿ ಮುಂದುವರೆಯುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಐತಿಹಾಸಿಕ ಕಿತ್ತೂರು ಕೋಟೆ ಸಂರಕ್ಷಣೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಮತ್ತು ದಲಿತ ಮುಖ್ಯಮಂತ್ರಿ ಅಧಿಕಾರಕ್ಕೆ ವಿಚಾರ ವೈಯಕ್ತಿಕ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣಿಗೋಪಾಲ, ಡಿಕೆಶಿವಕುಮಾರ್ ಮತ್ತು ನನ್ನನ್ನೂ ಸೇರಿದಂತೆ ಪಕ್ಷದ ಎಲ್ಲರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬ ಬೆಂಬಲಿವಿದೆ ಎಂದರು.
ಈಗಾಗಲೇ 6 ಬಾರಿ ಶಾಸಕನಾಗಿ, 3 ಬಾರಿ ಸಚಿವನಾಗಿ ಕಾರ್ಯ ನಿರ್ವಹಿಸಿಸುತ್ತಿದ್ದೇನೆ ಎಂದ ಸಚಿವ ಕೃಷ್ಣಭೈರೇಗೌಡ ಅವರು ಪಕ್ಷದಲ್ಲಿ, ಇಲಾಖೆಯಲ್ಲಿ ನಿರಂತರ ಕೆಲಸ, ಉತ್ತಮ ಸಂಪರ್ಕದೊಂದಿಗೆ ಗೌರವ ಸಂಪಾದಿಸಿದ್ದೇನೆ. ಈ ಮಧ್ಯೆ ನನಗೆ ನಾವುದೇ ಉನ್ನತ ಸ್ಥಾನದ ಆಕಾಂಕ್ಷೆಯಿಲ್ಲ ಎಂದರು.
ಕಿತ್ತೂರು ಕೋಟೆ ಸಂರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಸುಮಾರು 60 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಅಗತ್ಯ ಅನುದಾನದಲ್ಲಿ ಆಧುನಿಕ ತಂತ್ರಜ್ಞಾನ, ವಿಧಾನದೊಂದಿಗೆ ಕೋಟೆ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಭೈರೇಗೌಡ ಹೇಳಿದರು.