ಪೆನ್​ಡ್ರೈವ್ ​ ಪ್ರಕರಣದಲ್ಲಿ ಅನಗತ್ಯವಾಗಿ ಪ್ರತಿಕ್ರಿಯೆ ಕೊಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಸಚಿವರಿಗೆ ಸೂಚನೆ

Ravi Talawar
ಪೆನ್​ಡ್ರೈವ್ ​ ಪ್ರಕರಣದಲ್ಲಿ ಅನಗತ್ಯವಾಗಿ ಪ್ರತಿಕ್ರಿಯೆ ಕೊಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಸಚಿವರಿಗೆ ಸೂಚನೆ
WhatsApp Group Join Now
Telegram Group Join Now

ಬೆಂಗಳೂರು ಮೇ 21: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳಿರುವ ಪೆನ್​ಡ್ರೈವ್ ​ ಪ್ರಕರಣ ರಾಜ್ಯದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ  ನಡೆಸುತ್ತಿದೆ. ಪ್ರಕರಣದ ಕುರಿತು ಕೆಲ ಸಚಿವರ ಹೇಳಿಕೆಗಳು ತನಿಖೆಯ ತಪ್ಪಿಸುವ ಸಾಧ್ಯತೆ ಇದೆ. ಹೇಳಿಕೆಗಳಿಂದ ಪಕ್ಷಕ್ಕೂ ಕೂಡ ಡ್ಯಾಮೆಜ್ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಚಿವರಿಗೆ ಕೆಲ ಸೂಚನೆ ನೀಡಿದ್ದಾರೆ.

ಪೆನ್​ಡ್ರೈವ್ ಪ್ರಕರಣದಲ್ಲಿ ಅನಗತ್ಯವಾಗಿ ಪ್ರತಿಕ್ರಿಯೆ ಕೊಡಬೇಡಿ. ಮಾತು ಹೆಚ್ಚಾದರೆ ಇಡೀ ಪ್ರಕರಣದ ದಿಕ್ಕೇ ತಪ್ಪಿ ಹೋಗಬಹುದು. ಹೀಗಾಗಿ ಪ್ರತಿಕ್ರಿಯೆ ಕೊಡುವಾಗ ಎಚ್ಚರಿಕೆ ವಹಿಸಿ ಎಂದು ಮುಖಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಸಲಹೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಮತ್ತು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದೆ. ಇದೀಗ, ಹೆಚ್​ಡಿ ದೇವೇಗೌಡರ ಮಗ ಮತ್ತು ಮೊಮ್ಮಗ ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಸಹಜವಾಗಿ ಒಕ್ಕಲಿಗ ಸಮಾಜ ಕೂಡ ಮುಜುಗುರ ಪಡುವಂತಾಗಿದೆ. ಅಲ್ಲದೆ, ಹೆಚ್​ಡಿ ರೇವಣ್ಣ ಮತ್ತು ಪ್ರಜ್ವಲ್​ ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವಲ್ಲಿ ಡಿಕೆ ಶಿವಕುಮಾರ್​ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಒಕ್ಕಲಿಗರು ಡಿಕೆ ಶಿವಕುಮಾರ್​ ಮೇಲೆ ಮುನಿಸಿಕೊಳ್ಳಲು ಸಾಧ್ಯತೆ ಇದೆ. ಒಂದು ವೇಳೆ ಒಕ್ಕಲಿಗರು ಮುನಿಸಿಕೊಂಡರೆ ಕಾಂಗ್ರೆಸ್​ಗೆ ಹಳೇ ಮೈಸೂರು ಭಾಗದಲ್ಲಿ ನಷ್ಟವಾಗಲಿದೆ.

ಹೀಗಾಗಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳವಂತೆ ಡಿಕೆ ಶಿವಕುಮಾರ್​ ಅವರಿಗೆ ಒಕ್ಕಲಿಗ ನಾಯಕರು ಸಲಹೆ ನೀಡಿದ್ದಾರೆ. ಪೆನ್​ಡ್ರೈವ್​ ಕೇಸ್​ನಲ್ಲಿ ಮಾತನಾಡದಂತೆ ಸಲಹೆ ನೀಡಿದ್ದಾರೆ ಎಂದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರೆತಿದೆ.

WhatsApp Group Join Now
Telegram Group Join Now
Share This Article